ಭೀಕರ ಅಪಘಾತ | ಒಂದೇ ಕುಟುಂಬ ಇಬ್ಬರ ಸಾವು
ಚಿಕ್ಕೋಡಿ: ಅಪರಿಚಿತ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ರಾಯಬಾಗ ತಾಲೂಕಿನ ಅಳಗವಾಡಿ ಕೆನಾಲ್ ಬಳಿ ನಡೆದಿದೆ.
ರಾಯಬಾಗ ತಾಲ್ಲೂಕಿನ ಬಸ್ತವಾಡ ಗ್ರಾಮದ ಲಕ್ಷ್ಮಣ್ ಲಗಮಾಣ ಬಿ. ಪಾಟೀಲ್ (55) ಹಾಗೂ ಮಾಯಪ್ಪ ಪಾಟೀಲ್ ಮೃತ ದುರ್ದೈವಿ. ಇವರಿಬ್ಬರೂ ಒಂದೇ ಕುಟುಂಬದವರಾಗಿದ್ದಾರೆ. ಈ ಕುರಿತು ಹಾರೋಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ: ರಾಯಬಾಗದಿಂದ ಹಿಡಕಲ್ ಗ್ರಾಮಕ್ಕೆ ತೆರಳುವಾಗ ನಿಡಗುಂದಿ ಮತ್ತು ಅಳಗವಾಡಿ ಮಧ್ಯದಲ್ಲಿ ಬರುವ ಕೆನಾಲ್ ಬಳಿ ಅಪರಿಚಿತ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದಿದೆ. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ಕೆಳಗಡೆ ಬಿದ್ದು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಹಾರೂಗೇರಿ ಪೊಲೀಸ್ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.