ADVERTISEMENT
Tuesday, August 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಟೆಕ್ಸಸ್ ನ ಟೆಕ್ಸನ್ನರ ನಾಡಿನ ಪ್ರೇಮ ಅಭಿನಂದನೀಯವಷ್ಟೇ ಅಲ್ಲ ಟೆಕ್ಸನ್ನರ ಆತ್ಮಾಭಿಮಾನ ಶ್ಲಾಘನೀಯವೂ ಹೌದು

Mahesh M Dhandu by Mahesh M Dhandu
October 13, 2020
in Newsbeat, Saaksha Special, ಎಸ್ ಸ್ಪೆಷಲ್
Americans
Share on FacebookShare on TwitterShare on WhatsappShare on Telegram

ಹೆಚ್ಚಿನ ಎಲ್ಲಾ ಅಮೆರಿಕನ್ನರು ತಮ್ಮ ತಮ್ಮ ರಾಜ್ಯಗಳ ಬಗ್ಗೆ ಹೆಮ್ಮೆಪಡುವುದು ದಿಟವಾದರೂ ಈ ಹೆಮ್ಮೆ ಅತೀ ಹೆಚ್ಚಾಗಿರುವುದು ಟೆಕ್ಸಸ್ (Texans) ರಾಜ್ಯದವರಲ್ಲಿ ಅಂದರೆ ಟೆಕ್ಸನ್ನರಲ್ಲಿ. ದಶಕಗಳಷ್ಟು ಕಾಲ ಸ್ವತಂತ್ರ ದೇಶವಾಗಿದ್ದ ಕಾರಣಕ್ಕೋ ಏನೋ ತಮ್ಮ ರಾಜ್ಯದ ಬಗ್ಗೆ ಸಿಕ್ಕಾಪಟ್ಟೆ ಅಭಿಮಾನ ಇವರಿಗೆ. ನೀವು ಯಾವುದೇ ಪಟ್ಟಣದಲ್ಲಿ ಹತ್ತು ಹೆಜ್ಜೆ ನಡೆದರೆ ಕನಿಷ್ಟ ಐದು ಕಡೆ ಅಮೆರಿಕಾದ ರಾಷ್ಟ್ರಧ್ವಜ ಮತ್ತೆ ಅವರ ರಾಜ್ಯಬಾವುಟ ಕಾಣುವಿರಿ. ಎಲ್ಲೆಲ್ಲಿ ರಾಷ್ಟ್ರಧ್ವಜ ಹಾರಿಸ್ತಾರೋ ಅಲ್ಲೆಲ್ಲಾ ರಾಜ್ಯದ ಬಾವುಟ ಹಾರಿಸಲೇಬೇಕು ಇವರಿಗೆ. ಹೆಚ್ಚುಕಮ್ಮಿ ನಮ್ಮ ದಕ್ಷಿಣ ಭಾರತದಷ್ಟು ದೊಡ್ಡದಿರುವ ಈ ದೈತ್ಯ ರಾಜ್ಯಕ್ಕೆ ಒಂಟಿಚುಕ್ಕಿ ರಾಜ್ಯ ಇಲ್ಲ ಲೋನ್ ಸ್ಟಾರ್ ಸ್ಟೇಟ್ ಅಂತಾರೆ. ಇವರ ಬಾವುಟದಲ್ಲಿ ಒಂದು ಚುಕ್ಕಿಯಿರುವುದರಿಂದ ಹೀಗೆನ್ನುವುದು ಅಂದೆನಿಸಿದರೂ ಅನೇಕ ರೀತಿಯಿಂದ ಇವರು ಅಮೆರಿಕಾದೊಳಗೆ ವಿಭಿನ್ನರಾಗಿ ನಿಲ್ಲುವುದೇ ಕಾರಣವಿದ್ದಿರಬಹುದು.

ಆಗಲೇ ಹೇಳಿದ ಹಾಗೇ ಮಹಾದೈತ್ಯ ರಾಜ್ಯವಾಗಿರುವುದರಿಂದ ಎಲ್ಲದೂ ದೊಡ್ಡದಿರಬೇಕೆನ್ನುವುದು ಇವರ ಖಯಾಲಿ. ಅಂತೆಯೇ ಅಲ್ಲಿ ಬಂದೊಡನೆಯೇ ಅವರ ದೊಡ್ಡದರ ಪ್ರೀತಿ ನಿಮ್ಮ ಗಮನಕ್ಕೆ ಬರುತ್ತದೆ. ಅಗಲ ರಸ್ತೆಗಳು, ವಿಸ್ತಾರವಾದ ಉದ್ಯಾನಗಳು, ವಿಶಾಲ ಮನೆಗಳು ಎಲ್ಲೆಡೆ ಕಾಣುತ್ತವೆ. ಅಷ್ಟು ಮಾತ್ರವಲ್ಲದೆ ಇಲ್ಲಿನ ವಿಶೇಷ ಆಕಳ ತಳಿ ಲಾಂಗ್ ಹಾರ್ನ್, ಇಲ್ಲಿನ ಉಪಾಹಾರ ಗೃಹಗಳಲ್ಲಿ ಕೊಡುವ ಊಟದ ಪ್ರಮಾಣ, ಇಲ್ಲಿನ ಜನರ ಹೃದಯ ಎಲ್ಲವೂ ದೊಡ್ಡದೇ (ಟೆಕ್ಸಸ್ ಅನ್ನುವ ಶಬ್ದದ ಹುಟ್ಟಾದುದೇ ಗೆಳೆಯ ಎಂಬ ಶಬ್ದದಿಂದ). ಯಾರಾದರೂ ಸ್ಥಳೀಯ ಹಿರಿಯರ ಹಿಡಿದು ಸ್ವಲ್ಪವೇ ತಲೆ ತಿಂದರೆ ಅವರ ದೊಡ್ಡದರ ಪ್ರೀತಿಯ ಬಗ್ಗೆ ಸಾಕಷ್ಟು ರಸವತ್ತಾದ ಕತೆಗಳ ಹೇಳ್ತಾರೆ. ಅದಕ್ಕೇ ಅಲ್ಲಿನ ಮೀಮರ್‌ಗಳು ಅವರ ದೊಡ್ಡದರ ಹುಚ್ಚಿನ ಬಗ್ಗೆ ನೂರಾರು ಮೀಮ್‌ಗಳನ್ನ ಸೃಷ್ಟಿಸಿ ಇಟ್ಟಿದ್ದಾರೆ.

Related posts

politics/r-ashok-lead-bjp-jds-padayatra-against-bidadi-township-project

ಬಿಡದಿ ಟೌನ್‌ಶಿಪ್‌ ಯೋಜನೆ ಜಾರಿ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ, ಯೋಜನೆ ಜಾರಿಗೆ ಅವಕಾಶ ನೀಡಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ

August 10, 2026
ಕಳಂಕಿತ ಸಚಿವ ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ತೆಗೆದುಹಾಕಲು ಬಿಜೆಪಿ-ಜೆಡಿಎಸ್‌ ಜಂಟಿ ಹೋರಾಟ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಕಳಂಕಿತ ಸಚಿವ ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ತೆಗೆದುಹಾಕಲು ಬಿಜೆಪಿ-ಜೆಡಿಎಸ್‌ ಜಂಟಿ ಹೋರಾಟ: ಪ್ರತಿಪಕ್ಷ ನಾಯಕ ಆರ್‌.ಅಶೋಕ

August 10, 2026

ಇತಿಹಾಸ ಮರೆತಿರುವ ಕಾಳುಮೆಣಸಿನ ರಾಣಿ ಅಥವಾ ಗಂಡು ರಾಣಿ ಚೆನ್ನಭೈರಾದೇವಿಯ ಸಂಕ್ಷಿಪ್ತ ಕಥನ

ಡಾಲಸ್, ಹ್ಯೂಸ್ಟನ್‌ಗಳಂತ ಮಹಾನಗರಗಳನ್ನು ರಾಜಧಾನಿಯನ್ನಾಗಿ ಮಾಡಿಕೊಳ್ಳದೇ ಆಸ್ಟಿನ್ ಎಂಬ ಸುರಸುಂದರಿ ನಗರಿಯನ್ನ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದಾರೆ. ಎಲ್ಲೆಡೆ ಹಸುರಿನಿಂದ ಕಂಗೊಳಿಸುವ, ಚಿಕ್ಕಪುಟ್ಟ ಗುಡ್ಡಗಳು, ಚಂದದ ನದಿ, ಸರೋವರಗಳಿಂದ ಕೂಡಿದ ಈ ಊರಿಗೆ ಹೋದರೆ ಅಷ್ಟು ಸುಲಭಕ್ಕೆ ವಾಪಾಸಾಗಲು ಮನಸ್ಸಾಗುವುದಿಲ್ಲ. ಇಲ್ಲಿನ ರಾಜ್ಯಸೌಧ ವೈಟ್‌ಹೌಸಿಗಿಂತಲೂ ದೊಡ್ಡದು ಅಂತ ಕೊಚ್ಚಿಕೊಳ್ತಾರೆ.

ಮೆಕ್ಸಿಕೋ ಕೊಲ್ಲಿಯಲ್ಲಿ ಅಗಾಧವಾದ ತೈಲ ನಿಕ್ಷೇಪಗಳಿರುವುದರಿಂದ, ದುಬಾರಿ ಕ್ಯಾಲಿಫೋರ್ನಿಯಾದಿಂದ ಕಂಪನಿಗಳನ್ನ ತನ್ನತ್ತ ಎಳೆಯುತ್ತಿರುವುದರಿಂದ ಇವರಿಗೆ ದುಡ್ಡಿಗೇನೂ ಕೊರತೆಯಿಲ್ಲ. ಹಾಗೆ ಸಂಪಾದಿಸಿದ ದುಡ್ಡಲ್ಲಿ ಅರ್ಧ ಭಾಗವನ್ನು ಫ್ಲೈಓವರ್ ಕಟ್ಟೋಕೆ, ರಸ್ತೆ ಮಾಡೋಕೆ ಬಳಸ್ತಾರೆ ಅನ್ನೋದು ನನ್ನ ಧೃಡವಾದ ಅಭಿಪ್ರಾಯ. ಬಹಳ ಉತ್ತಮ ರಸ್ತೆಗಳ ಕಾರಣ ಮತ್ತು ಬಯಲು ಪ್ರದೇಶವಾದ ಕಾರಣ ಉಳಿದೆಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ವೇಗಮಿತಿ ತುಂಬಾ ಜಾಸ್ತಿ. ಚಚ್ಚಿಕೊಂಡು ಓಡಿಸ್ತಾ ಇರ್ತಾರೆ.

ನೈಸರ್ಗಿಕ ಸೌಂದರ್ಯದ ವಿಷಯದಲ್ಲಿ ಇದು ಸುಮಾರಾಗಿದೆಯಷ್ಟೇ. ಅರೆ ಮರುಭೂಮಿ,‌ ಹುಲ್ಲುಗಾವಲು ಇವುಗಳಿಂದಲೇ ತುಂಬಿದೆ. ಅಲ್ಲಿರೋ ಯಾವ್ದೋ ಒಂದು ದನ‌ ಮೇಯಿಸೋ ಮಾಳ ರೋಡ್ ಐಲೆಂಡ್ ರಾಜ್ಯಕ್ಕಿಂತ ದೊಡ್ಡಕಿದೆ ಅಂತ ಕೊಚ್ಕೋತಾರೆ. ಇಲ್ಲಿ ಸುಂದರ ಸ್ಥಳಗಳು‌ ಖಂಡಿತವಾಗಿಯೂ‌‌ ಇವೆ ಆದರೆ‌ ಕಮ್ಮಿ.

ಬರೀ ಸಬ್‌ವೇ, ಕೆಎಫ್‌ಸಿ, ಮೆಕ್ಡಿಗಳೇ ಅಮೆರಿಕಾದ ಆಹಾರ ಸಂಸ್ಕೃತಿಯ ರಾಭಾರಿಗಳೆಂದು ತಿಳಿದವರಿಗೆ ಟೆಕ್ಸ್‌ಮೆಕ್ಸ್ ಅನ್ನೋ ರುಚಿಕರ ಕ್ಯುಸೈನ್ ಇರೋದು ಸ್ವಲ್ಪ ನೆಮ್ಮದಿ ಕೊಡತ್ತೆ.

‘ಚಾರ್ಲೊಟ್ – ಜೋರ್ಡಿಯನ್ ರ ಸಮಯ ಯಾತ್ರೆಯ ವಿಸ್ಮಯ; ಒಂದು ಶತಮಾನ ಹಿಂದಕ್ಕೆ ಹೋಗಿ ಮರಳಿತಾ ಈ ಜೋಡಿ?

ಭಾರತೀಯರು ನಿಧಾನಕ್ಕೆ ಇಲ್ಲಿ ಬಂದು ತುಂಬಿಕೊಳ್ತಾ ಇದಾರೆ. ಹೇಗೆ ಪಂಜಾಬಿನ ಪ್ರತಿಮನೆಯಲ್ಲೂ ಒಬ್ಬರು ಕೆನಡಾದಲ್ಲಿರುವರೋ, ಹಾಗೆ ಆಂಧ್ರದ ಪ್ರತಿಮನೆಯವರೂ ಅಮೇರಿಕಾದಲ್ಲಿ ಅದರಲ್ಲೂ ಅಲ್ಲಿಯದೇ ವಾತಾವರಣವಿರುವ ಟೆಕ್ಸಸ್ಸಿನಲ್ಲಿ ಇರಬೇಕೆನ್ನುವುದು ಅಘೋಷಿತ ನಿಯಮ. ಇನ್ನು ೧೫-೨೦ ವರ್ಷಗಳಲ್ಲಿ ತೆಲುಗು ದೇಶಂ ಅಥವಾ ವೈಎಸ್‌ಆರ್ ಕಾಂಗ್ರೆಸ್ ಅಲ್ಲಿ ಅಧಿಕಾರ ಹಿಡಿಯುವ ಎಲ್ಲಾ ಲಕ್ಷಣಗಳಿವೆ.

ಇದೆಲ್ಲಾ ವಿಕಿಪೀಡಿಯಾದಲ್ಲೋ ಇಂಟರ್‌ನೆಟ್ಟಲ್ಲೋ ಸಿಗತ್ತೆ. ಇದು ಬರಿ ಒಂದು ಚಿಕ್ಕ ಓವರ್‌ವ್ಯೂ ಅಷ್ಟೇ. ಇದನ್ನ ಯಾಕೆ ಕೊಡಬೇಕಾಯಿತೆಂದರೆ ಮೇಲೆ ಹೇಳಿದಂತೆ ಈಗ ಅಲ್ಲಿ ಭಾರತೀಯರು ಬಂದು ತುಂಬುತ್ತಿರುವ ಪ್ರಮಾಣ ನೋಡಿದರೆ ನನ್ನ ಫೇಸ್‌ಬುಕ್ ಬಳಗದಲ್ಲಿನ ಮೂರನೇ ಒಂದು ಭಾಗದಷ್ಟು ಜನ ಇನ್ನು ೧೫-೨೦ ವರ್ಷದಲ್ಲಿ ಒಮ್ಮೆಯಾದರೂ ಉದ್ಯೋಗಕ್ಕಾಗಿಯೋ, ಮಗನ‌ ಮನೆಗೋ, ಬಾಳಂತನಕ್ಕೋ, ವಿದ್ಯಾಭ್ಯಾಸಕ್ಕೋ ಇನ್ಯಾವುದೋ ಕಾರಣಕ್ಕಾದರೂ ಭೇಟಿ‌ ಕೊಟ್ಟೇ ಕೊಡ್ತಾರೆ ಅನ್ನೋದು‌ ನನ್ನ ಧೃಡವಾದ ನಂಬಿಕೆ.

ವಿ.ಸೂ:- ಈ ಪಟ ತೆಗೆದಿದ್ದು ಟೆಕ್ಸಸ್ ಓಕ್ಲಹೋಮಾ ಗಡಿಯಲ್ಲಿ

-ಗಿರಿಧರ್ ಭಟ್ ಗುಂಜಗೋಡು
ಸಾಫ್ಟ್ ವೇರ್ ಉದ್ಯೋಗಿ ಹಾಗೂ ಹವ್ಯಾಸಿ ಬರಹಗಾರ
ಸಿದ್ಧಾಪುರ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: #Saaksha TVAmericansTexans
ShareTweetSendShare
Join us on:

Related Posts

politics/r-ashok-lead-bjp-jds-padayatra-against-bidadi-township-project

ಬಿಡದಿ ಟೌನ್‌ಶಿಪ್‌ ಯೋಜನೆ ಜಾರಿ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ, ಯೋಜನೆ ಜಾರಿಗೆ ಅವಕಾಶ ನೀಡಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
August 10, 2026
0

  ಇದು ಕಾಂಗ್ರೆಸ್‌ ಸರ್ಕಾರದ ಶವಪೆಟ್ಟಿಗೆಗೆ ಕೊನೆಯ ಮೊಳೆ ಬಿಡದಿಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಪ್ರತಿಪಕ್ಷ ನಾಯಕರು ಬಿಡದಿ,  ಬಿಡದಿ ಟೌನ್‌ಶಿಪ್‌ ಯೋಜನೆ ಜಾರಿ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ...

ಕಳಂಕಿತ ಸಚಿವ ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ತೆಗೆದುಹಾಕಲು ಬಿಜೆಪಿ-ಜೆಡಿಎಸ್‌ ಜಂಟಿ ಹೋರಾಟ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಕಳಂಕಿತ ಸಚಿವ ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ತೆಗೆದುಹಾಕಲು ಬಿಜೆಪಿ-ಜೆಡಿಎಸ್‌ ಜಂಟಿ ಹೋರಾಟ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
August 10, 2026
0

  ಬೆಂಗಳೂರು, ಸಚಿವ ಬಿ.ನಾಗೇಂದ್ರ ಕಳಂಕಿತರಾಗಿದ್ದು, ಮುಖ್ಯಮಂತ್ರಿಗೆ ಬೆದರಿಕೆ ಹಾಕಿರುವುದರಿಂದಲೇ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಅವರನ್ನು ಸಚಿವ ಸಂಪುಟದಿಂದ ತೆಗೆದುಹಾಕಲು ಬಿಜೆಪಿ ಹಾಗೂ ಜೆಡಿಎಸ್‌ ಒಂದಾಗಿ ಹೋರಾಟ...

entertainment/santhosh-balaraj-bentlee-movie-trailer-released-loose-mada-yogi-pramod-shetty-emotional

ನಟ ಸಂತೋಷ್ ಬಾಲರಾಜ್ ‘ಬೆಂಟ್ಲಿ’ ಟ್ರೇಲರ್ ರಿಲೀಸ್: ಭಾವುಕರಾದ ಲೂಸ್ ಮಾದ ಯೋಗಿ, ಪ್ರಮೋದ್ ಶೆಟ್ಟಿ!

by admin
August 10, 2026
0

  ಬೆಂಗಳೂರು: 'ಗಣಪ' ಮತ್ತು 'ಕರಿಯ-2' ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದ ನಟ ಸಂತೋಷ್ ಬಾಲರಾಜ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ...

entertainment/dheeren-ramkumar-pabbar-movie-shooting-completed-release-soon

ಧೀರನ್ ರಾಮ್‌ಕುಮಾರ್ ಅಭಿನಯದ ‘ಪಬ್ಬಾರ್’ ಸಿನಿಮಾ ಚಿತ್ರೀಕರಣ ಪೂರ್ಣ: ಶೀಘ್ರದಲ್ಲೇ ಬೆಳ್ಳಿಪರದೆಗೆ

by admin
August 10, 2026
0

​ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಗುರುತಿಸಿಕೊಂಡಿರುವ ಡಾ. ರಾಜ್‌ಕುಮಾರ್ ಅವರ ಮೊಮ್ಮಗ ಧೀರನ್ ರಾಮ್‌ಕುಮಾರ್ ಅಭಿನಯದ ಬಹುನಿರೀಕ್ಷಿತ 'ಪಬ್ಬಾರ್' ಸಿನಿಮಾದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. 'ಶಾಖಾಹಾರಿ' ಚಿತ್ರದ...

https://www.zee5.com/movies/details/lenin/0-0-1z5lenin2026

by admin
August 10, 2026
0

ಝೀ 5' ನಲ್ಲಿ ಆಗಸ್ಟ್ 7 ರಿಂದಲೇ ಸ್ಟ್ರೀಮಿಂಗ್‌ ಆರಂಭಿಸಿದ 'ಅಯ್ಯಗಾರು' ಅಖಿಲ್ ಅಕ್ಕಿನೇನಿ ಅಭಿನಯದ 'ಲೆನಿನ್'; ಕನ್ನಡದಲ್ಲೂ ನೋಡಬಹುದು! ಅಖಿಲ್ ಅಕ್ಕಿನೇನಿ ಅವರ ವೃತ್ತಿಜೀವನದ ಅತಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram