ಬೆಂಗಳೂರು : ಪೊಲೀಸರ ಬ್ಯಾಗ್ ನ್ನೇ ಖದೀಮರು ಎಗರಿಸಿರುವ ಘಟನೆ ನಡೆದಿದೆ.
ನಗರದ ಅಭಿನಯ ಜಂಕ್ಷನ್ ನಲ್ಲಿರುವ ಪೊಲೀಸ್ ಚೌಕಿಯೊಳಗೆ ಇಟ್ಟಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಬ್ಯಾಗ್ನ್ನೇ ಎಗರಿಸಿ ಖದೀಮರು ಪರಾರಿಯಾಗಿದ್ದಾರೆ. ಕೆಆರ್ ಮಾರ್ಕೆಟ್ (KR Market) ಸಂಚಾರಿ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು. ಚೌಕಿಯೊಳಗೆ ಬಂದು ಬ್ಯಾಗ್ ನಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಕೊಟ್ಟಿದ್ದ ಬಾಡಿ ವೊರ್ನ್ ಕ್ಯಾಮೆರಾ ಇಟ್ಟಿದ್ದರು.
ಈ ಕುರಿತು ಮಹಿಳಾ ಪೊಲೀಸ್ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.