ಪೊಲೀಸರ ಬಲೆಗೆ ಬಿದ್ದ ಖದೀಮರು

1 min read
jewelry Saakshatv

ಪೋಲಿಸರ ಬಲೆಗೆ ಬಿದ್ದ ಖದೀಮರುSaaksha_tv

ಹಾಸನ : 46 ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣ ಕದ್ದಿದ್ದ ಖತರ್ನಾಕ ಕಳ್ಳರ ಗ್ಯಾಂಗೊಂದು ಪೊಲೀಸರಿಗೆ ಸಿಕ್ಕಿಬಿದ್ದಿದೆ. ಗುಂಪಿನ ಏಳು ಜನ ಕಳ್ಳರನ್ನ ಬಂಧಿಸಿರುವ ಪೊಲೀಸರು ಖದೀಮರನ್ನು ಜೈಲಿಗೆ ಅಟ್ಟಿದ್ದಾರೆ.

ಹಾಸನದಲ್ಲಿ ಇತ್ತೀಚಿಗೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಖದೀಮರನ್ನು ಸೆರೆ ಹಿಡಿಯಲು ಪೋಲಿಸರು ಬಲೆ ಬೀಸಿದ್ದರು. ಇದೇ ಕಾರ್ಯಾಚರಣೆಯ ವೇಳೆ ಇಂದು ಮುಂಜಾನೆ ಈ ಗ್ಯಾಂಗ ಪೋಲಿಸರ ಬಲೆಗೆ ಸಿಕ್ಕಿಬಿದ್ದಿದೆ. ಬಂಧಿತ ಕಳ್ಳರಿಂದ ಬೆಳ್ಳಿ ಪದಾರ್ಥಗಳು ಹಾಗೂ ಒಂದು ಇನ್ನೋವಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

Police Saaksha Tv

ಅಲ್ಲದೇ 805 ಗ್ರಾಂ ಚಿನ್ನ, 300 ಗ್ರಾಂ ಬೆಳ್ಳಿ ಕೂಡಾ ವಶಪಡಡಿಸಿಕೊಳ್ಳಲಾಯಿತು. ಕಳ್ಳರ ವಿರುಧ್ದ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ 9 ಪ್ರಕರಣಗಳು, ಹಳೆ-ಮೈಸೂರು ಪೊಲೀಸ್ ಠಾಣೆಯಲ್ಲಿ 3 ಪ್ರಕರಣಗಳು, ಚನ್ನರಾಯಪಟ್ಟಣದಲ್ಲಿ 3 ಪ್ರಕರಣಗಳು,  ಅರಕಲಗೂಡು ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದ್ದವು.

ಖದೀಮರ ಪೈಕಿ ಇಬ್ಬರು ತಮಿಳುನಾಡು ಮೂಲದವರು, ಶಿವಮೊಗ್ಗ ಮೂಲದ ನಾಲ್ವರು ಹಾಗೂ ಮೈಸೂರು ನಗರದ ಓರ್ವ ಸೇರಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd