ಮೊದಲೇರಡು ಅಲೆಗಿಂತ ಎರಡು ಪಟ್ಟು ಹೆಚ್ಚು ಹರಡುತ್ತಿರುವ ಮೂರನೇ ಅಲೆ Saaksha Tv
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಬಹಳಷ್ಟು ವೇಗವಾಗಿ ಹರಡುತ್ತಿದೆ. ಮೊದಲೆರಡು ಅಲೆಗಳಿಗಿಂತ ಎರಡು ಪಟ್ಟು ಹೆಚ್ಚು ವೇಗವಾಗಿ ಹರಡುತ್ತಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ ಟ್ವಿಟ್ ಮಾಡಿದ್ದಾರೆ.
ಮೊದಲೆನೇ ಅಲೆಯಲ್ಲಿ ಕೊರೊನಾ ಹರಡುವಿಕೆಯ ಪ್ರಮಾಣವು ಜೂನ್ 25ರಂದು 442 ಸೋಂಕಿತರು ಪತ್ತೆಯಾದರು, ಜೂನ್ 27ರಂದು 918 ಮುಂದೆ 13ದಿನಗಳಲ್ಲಿ 3693, ನಂತರ 33 ದಿನಗಳಲ್ಲಿ ಅಂದರೆ ಅಗಸ್ಟ್ 20ರಲ್ಲಿ 7385 ಪ್ರಕರಣಗಳು ಪತ್ತೆಯಾಗಿದ್ದವು.
ಎರಡನೇ ಅಲೆಯಲ್ಲಿ ಮಾರ್ಚ್ 1ರಂದು 349, ಮಾರ್ಚ್ 10ರಂದು 760, ಮುಂದಿನ 18 ದಿನಗಳಲ್ಲಿ ಅಂದರೆ ಮಾರ್ಚ್ 28ರಂದು 3087 ನಂತರ ಎಪ್ರಿಲ್ 6 ರಂದು 6150 ಸೋಂಕು ದೃಡಪಟ್ಟಿದ್ದವು.
ಮೂರನೇ ಅಲೆಯಲ್ಲಿ ಡಿಸೆಂಬರ್ 27 ರಂದು 289, ಡಿಸೆಂಬರ್ 30 ರಂದು 707, ಜನವರಿ 4 ರಂದು 2479, ಇದೇ ತಿಂಗಳು 6ರಂದು 5031 ಮತ್ತು 9ರಂದು 12,000 ಪ್ರಕರಣಗಳು ದೃಡಪಟ್ಟಿದ್ದು ಮೊದಲೇರಡು ಅಲೆಗಿಂತ ವೇಗವಾಗಿ ಹರಡುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನೂ ಕೊರೊನಾ ನಿಯಂತ್ರಿಸಲು ಸರಕಾರ ಕಠೀಣ ನಿಯಮಗಳನ್ನು ಜಾರಿ ಮಾಡಿದೆ. ಆದರೂ ಕೂಡ ಸೋಂಕು ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.