2020 ಐಪಿಎಲ್ ನಲ್ಲಿ ಪ್ರಜ್ವಲಿಸುತ್ತಿರುವ “ರಾಹುಲ್” ಅನ್ನೋ ಹೆಸರು …!
ಕೆ.ಎಲ್.ರಾಹುಲ್, ರಾಹುಲ್ ಟೆವಾಟಿಯಾ.. ರಾಹುಲ್ ತ್ರಿಪಾಠಿ.. ರಾಹುಲ್ ಅನ್ನೋ ಹೆಸರಿನ ಈ ಮೂವರು ಆಟಗಾರರು ಈ ಬಾರಿಯ ಐಪಿಎಲ್ ನಲ್ಲಿ ಭಾರೀ ಸದ್ದು ಮಾಡಿದ್ದಾರೆ.
ಇನ್ನೊಂದು ವಿಶೇಷತೆ ಅಂದ್ರೆ ಈ ಮೂವರು ಆಟಗಾರರು ಏಕಾಂಗಿಯಾಗಿ ಹೋರಾಟ ನಡೆಸಿ ತಮ್ಮ ತಂಡಕ್ಕೆ ಗೆಲುವನ್ನು ದಕ್ಕಿಸಿಕೊಟ್ಟಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ ಬಗ್ಗೆ ಹೇಳುವುದೇ ಬೇಡ. ಟೀಮ್ ಇಂಡಿಯಾ ಪರ ರನ್ ಮಳೆ ಹರಿಸಿರುವ ಕೆ.ಎಲ್. ರಾಹುಲ್ ಈ ಬಾರಿಯ ಐಪಿಎಲ್ ನಲ್ಲಿ ಚೊಚ್ಚಲ ಶತಕ ಕೂಡ ದಾಖಲಿಸಿದ್ದಾರೆ. ಹೀಗಾಗಿ ಕೆ.ಎಲ್. ರಾಹುಲ್ ಬ್ಯಾಟಿಂಗ್ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರವೇ.
ಇನ್ನು ರಾಹುಲ್ ಟೆವಾಟಿಯಾ.. ರಾಜಸ್ತಾನ ರಾಯಲ್ಸ್ ತಂಡದ ಆಲ್‍ರೌಂಡರ್.ಕಿಂಗ್ಸ್ ಇಲೆವೆನ್ ತಂಡದ ವಿರುದ್ಧ ಸೋಲುವ ಹಂತದಲ್ಲಿ ರಾಹುಲ್ ಟೆವಾಟಿಯಾ ಎಲ್ಲರನ್ನು ಚಕಿತಗೊಳಿಸಿದ್ದರು.
ಕಿಂಗ್ಸ್ ಪಂಜಾಬ್ ತಂಡದ ಪ್ರಮುಖ ಬೌಲರ್ ಕಾಟ್ರೆಲ್ ಅವರ ಒಂದು ಓವರ್ ನಲ್ಲಿ ಐದು ಸಿಕ್ಸರ್ ಸಿಡಿಸಿ ತಂಡಕ್ಕೆ ಅಚ್ಚರಿಯ ಗೆಲುವನ್ನು ತಂದುಕೊಟ್ಟಿದ್ದರು. ರಾಹುಲ್ ಟೆವಾಟಿಯಾ ಅವರ ಬ್ಯಾಟಿಂಗ್ ಅಬ್ಬರಕ್ಕೆ ಮಾಜಿ ಕ್ರಿಕೆಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದೀಗ ಐಪಿಎಲ್ ನ 21ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್ ರೌಂಡರ್ ರಾಹುಲ್ ತ್ರಿಪಾಠಿ ಅವರು ಸಿಎಸ್‍ಕೆ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ಪಡೆದುಕೊಂಡ ರಾಹುಲ್ ತ್ರಿಪಾಠಿ ಅವರು ಸರಿಯಾಗಿಯೇ ಬಳಸಿಕೊಂಡ್ರು.
ಐಪಿಎಲ್ 2020- ಡ್ವೇನ್ ಬ್ರೇವೋ 150 ವಿಕೆಟ್.. ಅಗ್ರ ವಿಕೆಟ್ ಪಡೆದವರ ಸಾಲಿನಲ್ಲಿ ಬ್ರೇವೋ
ಒಂದು ಕಡೆ ಕೆಕೆಆರ್ ತಂಡದ ವಿಕೆಟ್ ಗಳು ಪತನಗೊಳ್ಳುತ್ತಿದ್ರೂ ರಾಹುಲ್ ತ್ರಿಪಾಠಿ ಮಾತ್ರ ತಲೆಕೆಡಿಸಿಕೊಳ್ಳಲಿಲ್ಲ. ಸಿಎಸ್‍ಕೆ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ್ರು. 51 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ ತ್ರಿಪಾಠಿ ಅವರು ಆಕರ್ಷಕ 81 ರನ್ ಸಿಡಿಸಿದ್ದರು.
ರಾಹುಲ್ ತ್ರಿಪಾಠಿ ಅವರು ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಚೆನ್ನೈ ತಂಡದ ವಿರುದ್ಧ 10 ರನ್ ಗಳಿಂದ ಗೆದ್ದ ಕೆಕೆಆರ್ ತಂಡ ಅಂಕಪಟ್ಟಿಯಲ್ಲಿ ಸದ್ಯ ಮೂರನೇ ಸ್ಥಾನದಲ್ಲಿದೆ.
ರಾಹುಲ್ ತ್ರಿಪಾಠಿ ಅವರ ಬ್ಯಾಟಿಂಗ್ ವೈಖರಿಗೆ ಕೆಕೆಆರ್ ಮಾಲೀಕ ಶಾರೂಕ್ ಖಾನ್, ಕೆಕೆಆರ್ ಟೀಮ್ ಮ್ಯಾನೇಜ್‍ಮೆಂಟ್ ಮೆಚ್ಚುಗೆ ವ್ಯಕ್ತಪಡಿಸಿದೆ.
ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ ನಲ್ಲಿ ರಾಹುಲ್ ಅನ್ನೋ ಹೆಸರುಗಳು ಪ್ರಜ್ವಲಿಸುತ್ತಿವೆ.
https://youtu.be/CWecDFAHmJ8?t=45