ರಷ್ಯಾದ ಮೇಜರ್ ಜನರಲ್ ನ್ನು ಹತ್ಯೆಗೈದ ಉಕ್ರೇನ್ ಸೈನ್ಯ – Saaksha Tv
ರಷ್ಯಾ: ರಷ್ಯಾ-ಉಕ್ರೇನ್ ಮಧ್ಯೆ ಯುದ್ಧ ತೀರ್ವ ಸ್ವರೂಪ ಪಡೆದ ಬೆನ್ನಲ್ಲೇ, ರಷ್ಯಾದ ಜನರಲ್ ಒಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್ ಮಿಲಿಟರಿ ಗುಪ್ತಚರ ಸಂಸ್ಥೆ ತಿಳಿಸಿದೆ.
ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ ಸುತ್ತಮುತ್ತ ನಡೆದ ಸಂಘರ್ಷದಲ್ಲಿ ರಷ್ಯಾದ ಮೇಜರ್ ಜನರಲ್ ವಿಟಾಲಿ ಗೆರಾಸಿಮೊವ್(45) ಸಾವನ್ನಪ್ಪಿದ್ದಾರೆ ಎಂದು ಗುರುತಿಸಲಾಗಿದೆ. ಇವರು ವಿಟಾಲಿ ಗೆರಾಸಿಮೊವ್ ಸಿರಿಯಾ ಮತ್ತು ಚೆಚೆನ್ಯಾದಲ್ಲಿ ನಡೆದ ಯುದ್ಧದಲ್ಲಿ ರಷ್ಯಾದ ಪಡೆಗಳೊಂದಿಗೆ ಹೋರಾಡಿದ್ದರು. 2014ರಲ್ಲಿ ಕ್ರಿಮಿಯಾವನ್ನು ವಶಪಡಿಸಿಕೊಂಡಾಗ ಆ ಯುದ್ಧದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಇದಕ್ಕೂ ಮೊದಲು ರಷ್ಯಾದ 7ನೇ ಏರ್ ಫೋರ್ಸ್ ವಿಭಾಗದ ಕಮಾಂಡಿಂಗ್ ಮೇಜರ್ ಜನರಲ್ ಆಂಡ್ರೇ ಸುಖೋವೆಟ್ಸ್ಕಿ ಯುದ್ಧದಲ್ಲಿ ಸಾವನ್ನಪ್ಪಿದ್ದರು ಎಂದು ರಷ್ಯಾದ ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದರು. ಅಂದಹಾಗೆ ಸುಖೋವೆಟ್ಸ್ಕಿ ಸಿರಿಯಾದಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.









