ಕೆಲ ದಿನಗಳ ಹಿಂದೆ ನಡೆದಿರುವ ಘಟನೆಯ ವಿಡಿಯೋವನ್ನು ನೆರೆಹೊರೆಯವರು ವೈರಲ್ ಮಾಡಿದ್ದಾರೆ. 8 ವರ್ಷದ ದತ್ತು ಮಗನಿಗೆ ತಂದೆ ಥಳಿಸುತ್ತಿರುವ ವಿಡಿಯೋ ವೈರಲ್ , ಆಗಿದ್ದು, ತಂದೆಯನ್ನು ಠಾಣೆಗೆ ಕರೆಯಿಸಿ ನವನಗರ ಪೊಲೀಸರು ವಾರ್ನಿಂಗ್ ಮಾಡಿ ಕಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಮಗು ಕೊಟ್ಟಿರುವ ವಿಜಯಪುರದ ತಾಯಿಗೂ ಮಾಹಿತಿಯನ್ನು ಪೊಲೀಸರು ರವಾನೆ ಮಾಡಿದ್ದಾರೆ. ಆದ್ರೆ ಈ ಬಗ್ಗೆ ಮಗುವನ್ನು ದತ್ತು ಕೊಟ್ಟಿರುವ ತಾಯಿ ಯಾವುದೇ ದೂರು ಕೊಟ್ಟಿಲ್ಲ. ಮಗುವನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಏನೋ ಕಾರಣಕ್ಕೆ ಬೆದರಿಸಿರಬಹುದು. ಈ ಬಗ್ಗೆ ದೂರು ಕೊಡಲ್ಲ ಅಂತಾ ಬಾಲಕನ ತಾಯಿ ಹೇಳಿದ್ದಾಗಿ ತಿಳಿದು ಬಂದಿದೆ. ಹಾಗಾಗಿ ಇನ್ನೊಮ್ಮೆ ಮಗನಿಗೆ ದೈಹಿಕ, ಮಾನಸಿಕ ಹಿಂಸೆ ಕೊಟ್ರೆ ಹುಷಾರ್ ಎಂದು ನವನಗರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗ್ತಿದೆ. ದತ್ತು ತಂದೆ ಜೊತೆ ಜಗಳ ಮಾಡಿದ್ದ ಅವರ ಮನೆ ಹತ್ತಿರದ ಒಬ್ಬರು ಬಾಲಕನಿಗೆ ಹೊಡೆಯುವ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ ಎನ್ನಲಾಗ್ತಿದೆ.
ಕಾಮನ್‌ವೆಲ್ತ್ ಗೇಮ್ಸ್ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ
ಕಾಮನ್‌ವೆಲ್ತ್ ಗೇಮ್ಸ್ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ ನವದೆಹಲಿಯ ಸಚಿವರ ನಿವಾಸದಲ್ಲಿ ಭೇಟಿ; ನಿಮ್ಮ ಸಾಧನೆ ಪ್ರೇರಣಾದಾಯಕ ಎಂದ ಕೇಂದ್ರ ಸಚಿವರು ಶಿಲ್ಪಾ...








