ರಾಮನಗರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಮನವಿ ಮೇರೆಗೆ ಚನ್ನಪಟ್ಟಣ ನಗರದಲ್ಲಿ ಸ್ವಯಂಪ್ರೇರಿತ ಲಾಕ್‍ಡೌನ್‍ಗೆ ನೀಡಿದ್ದ ಕರೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ವರ್ತಕರು ಸಭೆ ಸೇರಿ ಮಧ್ಯಾಹ್ನ 12 ಗಂಟೆಯವರೆಗೂ ಬಾಗಿಲು ತೆಗೆದು ಸಾರ್ವಜನಿಕರಿಗೆ ಸೇವೆ ಒದಗಿಸಿ, ನಂತರ ಸಂಪೂರ್ಣವಾಗಿ ಸ್ವಯಂ ಬಂದ್ ಮಾಡುವ ನಿರ್ಣಯ ಅಂಗೀಕರಿಸಿದ್ದರು. ಆದರೆ, ಈ ನಿರ್ಧಾರ ಸಭೆಯ ತೀರ್ಮಾನಕ್ಕಷ್ಟೇ ಸೀಮಿತವಾಗಿದೆ.
ಅಲ್ಲೊಂದು ಇಲ್ಲೊಂದು ಎಂಬಂತೆ ಬೆರಳೆಣಿಕೆಯಷ್ಟು ಅಂಗಡಿಗಳು ಮುಚ್ಚಿದ್ದು ಬಿಟ್ಟರೆ, ದಿನಸಿ ಅಂಗಡಿಗಳು, ಬೇಕರಿಗಳು, ಹೋಟೆಲ್ ಗಳು ಸೇರಿದಂತೆ ಕಬ್ಬಿಣ ಸಿಮೆಂಟ್ ಅಂಗಡಿಗಳಾದಿಯಾಗಿ ಎಲ್ಲವೂ ತೆರೆದಿವೆ. ಹೀಗಾಗಿ ಸ್ವಯಂಪ್ರೇರಿತ ಲಾಕ್‍ಡೌನ್‍ನ್ನು ಅಣಿಕಿಸುವಂತಾಗಿದೆ. ಕುಮಾರಸ್ವಾಮಿ ಕೂಡ ಲಾಕ್‍ಡೌನ್ ಮಾಡುವಂತೆ ಮನವಿ ಪತ್ರ ಕಳುಹಿಸಿದ್ದು, ಅವರ ಮನವಿಗೆ ಕಿಂಚಿತ್ತೂ ಗೌರವವಿಲ್ಲದಂತಾಗಿದೆ.
ಕನಕಪುರದಲ್ಲಿ ಶಾಸಕ ಡಿ.ಕೆ ಶಿವಕುಮಾರ್ ಹಾಗೂ ಮಾಗಡಿಯಲ್ಲಿ ಶಾಸಕ ಎ.ಮಂಜು ಖುದ್ದು ಸಭೆ ನಡೆಸಿ ಸ್ವಯಂಪ್ರೇರಿತ ಲಾಕ್‍ಡೌನ್‍ಗೆ ಮನವಿ ಮಾಡಿದ್ದು ಬಹುಮಟ್ಟಿಗೆ ಯಶಸ್ವಿಯಾಯಿತು. ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಕೇವಲ ಪತ್ರದ ಮೂಲಕ ಬಂದ ಮನವಿಗಷ್ಟೇ ಸೀಮಿತವಾಗಿದೆ.
ಯಡಿಯೂರಪ್ಪ ನನಗೆ ಹಿರಿಯಣ್ಣನಿದ್ದಂತೆ: ಈಶ್ವರಪ್ಪ ಸ್ಪಷ್ಟನೆ, ರಾಜಕೀಯ ಜರ್ನಿಗೆ ಹೊಸ ತಿರುವು?
ಮಾಜಿ ಸಚಿವ ಹಾಗೂ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ತಮ್ಮ ಮಾತುಗಳಿಂದ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ನನಗೆ ಹಿರಿಯಣ್ಣನಂತೆ. ಅವರಿಗೂ...