ಅಪ್ಪ, ಅಮ್ಮ ಇಲ್ಲ ಅಂತಾ.. ಯುವಕ ಆತ್ಮಹತ್ಯೆ mysore
ಮೈಸೂರು : ತಂದೆ, ತಾಯಿಯ ಮರಣದಿಂದಾಗಿ ಮನನೊಂದು ಯುವಕನೊರ್ವ ತನ್ನ ಜನ್ಮದಿನದಂದೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿ ನಡೆದಿದೆ.
30 ವರ್ಷದ ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿರುವ ಯುವಕನಾಗಿದ್ದಾನೆ.
ಮೆಡಿಕಲ್ ರೆಪ್ರೆಸಂಟೇಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಾರ್ತಿಕ್ ಕೆಲ ವರ್ಷಗಳ ಹಿಂದೆ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು.
ನಂತರದ ದಿನಗಳಲ್ಲಿ ತಂದೆ ಕೂಡ ಸಾವನ್ನಪ್ಪಿದ್ದರು. ಇದರಿಂದ ಆಘಾತಕ್ಕೊಳಗಾಗಿದ್ದ ಕಾರ್ತಿಕ್ ಈ ಹಿಂದೆ ಎರಡು ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಇದೀಗ ತನ್ನ ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಕಾರ್ತಿಕ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಶ್ರೀರಂಗಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.