ಶಿವಮೊಗ್ಗ: ಪತ್ನಿ ಮಾತನಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಎದುರು ಮನೆಯ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ನಗರದ ಬೆಳಲಮಕ್ಕಿಯಲ್ಲಿ ಈ ಘಟನೆ ನಡೆದಿದೆ. ನವೀನ್ ಹಲ್ಲೆಗೆ ಒಳಗಾದ ಯುವಕ. ರವಿ ಹಲ್ಲೆ ಮಾಡಿದ ಆರೋಪಿ. ಮೊದಲು ಯುವಕನ ಕಾರಿನ ಮೇಲೆ ಕತ್ತಿ, ರಾಡ್ ನಿಂದ ರವಿ ದಾಳಿ ನಡೆಸಿದ್ದಾನೆ. ನಂತರ ಮನೆಯಿಂದ ಯುವಕ ನವೀನ್ ಹೊರ ಬರುತ್ತಿದ್ದಂತೆ ನವೀನ್, ಆತನ ಸ್ನೇಹಿತ ಧರೇಶ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಕತ್ತಿ ದಾಳಿಯಿಂದ ಬೆರಳು ಕಟ್ ಆಗಿದ್ದು, ಎದೆ ಭಾಗದಲ್ಲಿ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.
ಸದ್ಯ ನವೀನ್ ನನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಧರೇಶ್ಗೆ ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಸಾಗರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.