ಹಾಸನ: ಶುಂಠಿಗೆ ಕಳೆನಾಶಕ ಸಿಂಪಡಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ತಾಲೂಕಿನ ಕಾರ್ಲೆ ಗ್ರಾಮದಲ್ಲಿ ನಡೆದಿದೆ. ಕೀರ್ತಿ(23) ಸಾವನ್ನಪ್ಪಿದ ಯುವಕ. ಈ ಯುವಕ ಕಳೆನಾಶಕ ಸಿಂಪಡಣೆ ಮಾಡುವ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮ ವಹಿಸದೆ ಯಡವಟ್ಟು ಮಾಡಿಕೊಂಡಿದ್ದರಿಂದಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಕಿಡ್ನಿ, ಲಿವರ್, ಶ್ವಾಸಕೋಶ ನಿಷ್ಕ್ರಿಯದಿಂದ ಯುವಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಯುವಕ ಒಂದು ವಾರಗಳ ಕಾಲ ಸತತವಾಗಿ ಶುಂಠಿಗೆ(Ginger) ಕಳೆನಾಶಕ ಸಿಂಪಡಿಸಿದ್ದ. ನಂತರ ಆತನಿಗೆ ದಿಢೀರ್ ವಾಂತಿ ಶುರುವಾಗಿತ್ತು. ನಂತರ ಸುಸ್ತಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಆಸ್ಪತ್ರೆಗೆ ದಾಖಲಾಗಿ 4 ದಿನಗಳ ನಂತರ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾನೆ. ರಕ್ತದ ಪರೀಕ್ಷೆ ವೇಳೆ ಕೀರ್ತಿ ದೇಹದಲ್ಲಿ ವಿಷ ಇರುವುದು ದೃಢಪಟ್ಟಿತ್ತು. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.