ಬೆಂಗಳೂರು : ಯುವಕನೊಬ್ಬ ವೈದ್ಯರು ಮಾಡಿರುವ ಇಂಜಕ್ಷನ್ ಗೆ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ.
ಜ್ವರ (Fever) ಎಂದು ಆಸ್ಪತ್ರೆಗೆ ಯುವಕ ದಾಖಲಾಗಿದ್ದ. ಈ ಯುವಕನನ್ನು ಮೃತನನ್ನು ಅಮರ್ ಶೆಟ್ಟಿ (31) ಎಂದು ಗುರುತಿಸಲಾಗಿದೆ.
ಸಾವನ್ನುಪ್ಪಿದ ಯುವಕ ಉಡುಪಿ ಮೂಲದವನು ಎನ್ನಲಾಗಿದೆ. ಈತ ದುಬೈನಲ್ಲಿ 7 ವರ್ಷ ಕೆಲಸ ಮಾಡಿ, ನಂತರ ಬೆಂಗಳೂರಿಗೆ ಬಂದು ನೆಲೆಸಿದ್ದ. ಈತನಿಗೆ ಕಳೆದ ವಾರ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಅಲ್ಲೇ ಪಕ್ಕದಲ್ಲಿದ್ದ ಮಾಗಡಿ ರಸ್ತೆಯಲ್ಲಿರುವ ಕ್ಲಿನಿಕ್ಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದ. ಪರೀಕ್ಷೆ ಮಾಡಿದ ವೈದ್ಯ, ಜ್ವರಕ್ಕೆ ಇಂಜಕ್ಷನ್ ನೀಡಿದ್ದರು.
ಆದರೆ, ಕೊಟ್ಟ ಭಾಗದಲ್ಲಿ ನೋವು, ಊತ ಕಾಣಿಸಿಕೊಂಡಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಅಂತ ಕಿಮ್ಸ್ ಆಸ್ಪತ್ರೆಗೆ ಯುವಕ ದಾಖಲಾಗಿದ್ದಾನೆ. ಅಷ್ಟರಲ್ಲಿ ಯುವಕನ ಬಹು ಅಂಗಾಂಗಗಳಿಗೆ ಹಾನಿಯಾಗಿದೆ. ಕಿಮ್ಸ್ ಆಸ್ಪತ್ರೆ ವೈದ್ಯರ ಚಿಕಿತ್ಸೆಗೆ ಸ್ಪಂದಿಸಿದೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.