ದುಬೈ : ಮಹಾಮಾರಿ ಕೊರೊನಾ ಹೊಡೆತಕ್ಕೆ ಇಡೀ ವಿಶ್ವವೇ ಸ್ತಬ್ಧವಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಕೊರೊನಾ ಕಾಟದ ನಡುವೆವೂ ಕೆಲ ದೇಶಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಅದರಂತೆ ದುಬೈನಲ್ಲೂ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ಸುರಕ್ಷತೆ ನಿಯಮದ ಮೇರೆಗೆ ಚಿತ್ರಮಂದಿರಗಳು ಓಪನ್ ಆಗುತ್ತಿವೆ. ಇದರಿಂದ ಕೆಲ ತಿಂಗಳುಗಳಿಂದ ಮುಚ್ಚಿದ ಚಿತ್ರಮಂದಿರಗಳು ಈಗ ತೆರೆಯುತ್ತಿರುವುದರಿಂದ ಮನರಂಜನ ಕ್ಷೇತ್ರ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಮೇ 27 ರಿಂದ ಅಂದರೇ ನಾಳೆಯಿಂದಲೇ ದುಬೈನಲ್ಲಿ ಚಿತ್ರಮಂದಿರಗಳು ಓಪನ್ ಆಗುತ್ತಿದ್ದು, ಬೆಳಗ್ಗೆ 6ರಿಂದ ರಾತ್ರಿ 11 ರವರೆಗೆ ಯಾವುದೆ ನಿರ್ಬಂಧವಿರುವುದಿಲ್ಲ. ಇನ್ನು ಥಿಯೇಟರ್ ಗಳನ್ನು ತೆರೆಯಲು ಅನುಮತಿ ನೀಡಿರುವ ಅಲ್ಲಿನ ಸರ್ಕಾರ ಕಡ್ಡಾಯವಾಗಿ ಅನುಸರಿಸಲೇ ಬೇಕಾದ ಸುರಕ್ಷತೆ ಕ್ರಮಗಳನ್ನು ತಿಳಿಸಿದೆ.
ಚಿತ್ರಮಂದಿರಗಳನ್ನು ತೆರೆಯಲು ಅನುಸರಿಸಬೇಕಾದ ಸುರಕ್ಷತೆ ಕ್ರಮಗಳು
1. ಚಿತ್ರಮಂದಿರಕ್ಕೆ ಎಂಟ್ರಿ ಕೊಡುವ ಮುನ್ನ ವೀಕ್ಷಕರ ಟೆಂಪ್ರೇಚರ್ ಪರೀಕ್ಷೆ ಮಾಡುವುದು
2. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಕಡ್ಡಾಯ
3. ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್
4. ಕಡ್ಡಾಯವಾಗಿ ಸಾಮಾಜಿಕ ಅಂತಕ ಕಾಯ್ದುಕೊಳ್ಳುವುದು
5. ಒಂದು ಕುಟುಂಬದಲ್ಲಿ 4 ಜನರಿಗೆ ಒಟ್ಟಿಗೆ ಕುಳಿತುಕೊಳ್ಳಬಹುದು
6. 12 ವರ್ಷದೊಳಗಿನ ಮಕ್ಕಳು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪ್ರವೇಶವಿಲ್ಲ.
7. 30ರಷ್ಟು ಸೀಟ್ ಗಳಿಗೆ ಮಾತ್ರ ಅನುಮತಿ
ಇನ್ನು ದುಬೈನಲ್ಲಿ ಹಿಂದಿಯ ಆಂಗ್ರೇಜಿ ಮೀಡಿಯಂ, ಬ್ಯಾಡ್ ಬಾಯ್ಸ್ ಫಾರ್ ಲೈಫ್, ದಿ ಇನ್ ವಿಸಿಬಲ್ ಮ್ಯಾನ್, ಬ್ಲಡ್ ಶೂಟ್ ಸಿನಿಮಾಗಳು ರಿ ಓಪನ್ ದಿನ ಪ್ರದರ್ಶನಗೊಳ್ಳುತ್ತಿವೆ.