ದೇಶಾದ್ಯಂತ ಕೊರೊನಾ ಮರಣ ಮೃದಂಗ ಮೊಳಗಿಸುತ್ತಿದ್ದು, ಎಲ್ಲಾ ಉದ್ಯಮಗಳಲ್ಲೂ ಸಂಕಷ್ಟ ಎದುರಾಗಿದೆ. ಹೀಗಾಗಿ ಕೊರೊನಾ ಆತಂಕದ ನಡಡುವೇ ರಾಜ್ಯ ಸರ್ಕಾರ ಮತ್ತೆ ಲಾಕ್ ಡೌನ್ ಮಾಡದೇ ಇರಲು ಗಟ್ಟಿ ನಿರ್ಧಾರ ಮಾಡಿದ್ದು, ನಿಧಾನವಾಗಿ ಬಹುತೇಕ ಉದ್ಯಮಗಳನ್ನು ನಿಯಮಗಳ ಅನ್ವಯ ಮತ್ತೆ ಕಾರ್ಯ ನಿರ್ವಹಿಸಲು ಅನುಮತಿ ನೀಡುತ್ತಿದೆ. ಈ ಕೊರೊನಾ ಬಿಕ್ಕಟ್ಟಿನಿಂದಾಗಿ ಬಹುಮುಖ್ಯವಾಗಿ ಪೆಟ್ಟು ಅನುಭವಿಸಿರುವುದು ಚಿತ್ರಮಂದಿರಗಳ ಮಾಲೀಕರು. ಇದೀಗ ರಾಜ್ಯ ಸರ್ಕಾರದಿಂದ ಚಿತ್ರೋದ್ಯಮಕ್ಕೆ ಭರವಸೆಯ ಬೆಳಕು ಸಿಕ್ಕಂತಾಗಿದೆ.
ಹೌದು ಮತ್ತೆ ಚಿತ್ರಮಂದಿರಗಳು ತೆರೆಯುವ ಮುನ್ಸೂಚನೆ ಸಿಕ್ಕಿದೆ. ಕೆಲ ಮೂಲಗಳ ಪ್ರಕಾರ ಆಗಸ್ಟ್1 ರಿಂದ ರಾಜ್ಯ ಚಿತ್ರಮಂದಿರಗಳು ಓಪನ್ ಆಗಲಿವೆ ಎಂಬ ಗಾಳಿ ಸುದ್ದಿ ಹರಿದಾಡ್ತಿದೆ. ಆಗಸ್ಟ್1 ರಿಂದಲೇ ಚಿತ್ರಮಂದಿರ ತೆರೆಯಲು ಅನುಮತಿ ನೀಡಲಾಗುತ್ತದೆ. ಹೀಗೊಂದು ಸುದ್ದಿ ಈಗ ವ್ಯಾಪವಾಗಿ ಹರಿದಾಡ್ತಿದೆ. ಅನ್ಲಾಕ್3.0 ಭಾಗವಾಗಿ ಆಗಸ್ಟ್1 ರಿಂದ ಚಿತ್ರಮಂದಿರಗಳು ತೆರೆಯಲು ಅನುಮತಿ ನೀಡಲಾಗುತ್ತದೆಯಂತೆ. ಆದರೆ ಕೆಲವು ನಿಯಮಗಳನ್ನು ಸಹ ವಿಧಿಸಲಾಗುತ್ತದೆಯಂತೆ. ಜಿಮ್ ಮತ್ತು ಚಿತ್ರಮಂದಿರ ತೆರೆಯಲು ಉತ್ಸುಕವಾಗಿದೆ ಸರ್ಕಾರ ಕೇಂದ್ರ ಸರ್ಕಾರವು ಚಿತ್ರಮಂದಿರಗಳು, ಜಿಮ್ಅನ್ನು ತೆರೆಯಲು ಅನುಮತಿ ನೀಡಲು ಉತ್ಸುಕವಾಗಿದೆ. ಆದರೆ ಕಠಿಣವಾದ ನಿಯಮಗಳನ್ನು ವಿಧಿಸಲಾಗುತ್ತದೆಯಂತೆ. ಜುಲೈ 24 ರಂದು ನಡೆದಿದ್ದ ಸಭೆಯಲ್ಲಿ ಶಿಫಾರಸ್ಸು ಜುಲೈ 24 ರಂದು ಸಿಐಐ ಮಾಧ್ಯಮ ಸಮಿತಿಯೊಂದಿಗೆ ನಡೆದ ಸಿನಿಮಾ ಉದ್ಯಮ ಮಾತುಕತೆಯಲ್ಲಿ ಐಬಿ ಸಚಿವಾಲಯದ ಕಾರ್ಯದರ್ಶಿ ಅಮಿತ್ ಖರೆ, ದೇಶದಾದ್ಯಂತ ಸಿನಿಮಾ ಹಾಲ್ಗಳನ್ನು ಮತ್ತೆ ತೆರೆಯಲು ಆಗಸ್ಟ್ 1ರಿಂದ ಅನುಮತಿ ನೀಡಬಹುದು. ಇದಲ್ಲದೇ ಹೋದ ಪಕ್ಷದಲ್ಲಿ ಆಗಸ್ಟ್ 31ರ ವೇಳೆಗಾದರೂ ಅವಕಾಶ ಕೊಡಬಹುದು ಎಂದು ಶಿಫಾರಸು ಮಾಡಿರುವುದಾಗಿ ಹೇಳಿದ್ದರು ಎನ್ನಲಾಗಿದೆ.
ತಮಿಳುನಾಡು ರೈತರಿಗೂ ಸಿಹಿ ಸುದ್ದಿ ಕೊಟ್ಟರಾ ಡಿ ಕೆ ಶಿವಕುಮಾರ್ :ದಕ್ಷಿಣ ಭಾರತದ ಹೃದಯದಂತಿರುವ ಮೇಕೆದಾಟು ಯೋಜನೆ ಬಗ್ಗೆ ಕನ್ನಡಿಗರು ಮತ್ತು ತಮಿಳುನಾಡಿನವರು ತಿಳಿಯಲೇಬೇಕಾದ ಸತ್ಯವಿದು
ಮೇಕೆದಾಟು ಯೋಜನೆ ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ, ಇದು ಇಡೀ ದಕ್ಷಿಣ ಭಾರತದ ಪಾಲಿನ ಅತ್ಯಂತ ಮಹತ್ವದ ಮತ್ತು ಆಯಕಟ್ಟಿನ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ನಾವು ನೆರೆ...








