ಭೋಪಾಲ, ಮೇ 30 : ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಎರಡನೇ ಅವಧಿಗೆ ಮೊದಲ ವರ್ಷವನ್ನು ಪೂರ್ಣಗೊಳಿಸಿದ್ದು, ಈ ಸಂದರ್ಭದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮೋದಿ ಎಂಬ ಹೆಸರಲ್ಲಿ ಮಂತ್ರವಿದೆ ಎಂದು ಹೇಳಿದ್ದಾರೆ.
ಭಾರತವನ್ನು ವಿಶ್ವದಲ್ಲೇ ಶ್ರೇಷ್ಠ ರಾಷ್ಟ್ರವನ್ನಾಗಿಸಲು ಪ್ರಧಾನಿ ಮೋದಿ ಶ್ರಮಿಸುತ್ತಿದ್ದು ಅವರು ನಮಗೆಲ್ಲ ಪ್ರೇರಣೆಯಾಗಿದ್ದಾರೆ ಎಂದು ಚೌಹಾಣ್ ಹೇಳಿದ್ದಾರೆ.
ಮೋದಿ ಎನ್ನುವ ಹೆಸರಿನಲ್ಲಿ ಮಂತ್ರವಿದೆ ಎಂದ ಚೌಹಾಣ್ ಪ್ರತಿ ಅಕ್ಷರಗಳಿಗೂ ಉದಾಹರಣೆ ನೀಡಿ ಅದನ್ನು ವಿವರಿಸಿದ್ದಾರೆ.
ಮೋದಿ (MODI) ಹೆಸರಿನ
M – Motivational ಎಂದರೆ ಭಾರತವನ್ನು ಎತ್ತರಕ್ಕೆ ಕೊಂಡೊಯ್ಯಲು ಅವರು ಪಡುತ್ತಿರುವ ಶ್ರಮ ನಮಗೆಲ್ಲಾ ಪ್ರೇರಣೆ.
O – Om ಎನ್ನುವ ಪದವು ಅವಕಾಶವಾಗಿದ್ದು, ರಾಷ್ಟ್ರದ ಸುಪ್ತ ಅವಕಾಶಗಳನ್ನು ಹೊರತರುವಲ್ಲಿ ಅವರು ಕೆಲಸ .
D – Dynamic Leadership ಎಂದರೆ ಭಾರತವನ್ನು ವಿಶ್ವದಲ್ಲೇ ಶ್ರೇಷ್ಠವನ್ನಾಗಿಸಲು ಅವರ ಪ್ರಬಲ ನಾಯಕತ್ವ.
I – inspire ಎಂದರೆ ಸ್ಪೂರ್ತಿ. ಸ್ವಾವಲಂಬಿ ಭಾರತವನ್ನಾಗಿಸಲು ಅವರು ನಮಗೆಲ್ಲ ಸ್ಪೂರ್ತಿ
ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ತನಿಖಾ ಸಂಸ್ಥೆಗಳು ಮೋದಿ ಸರ್ಕಾರದ ಕೈಗೊಂಬೆಗಳು,ಇಡಿ ಅಂದ್ರೆ ಎಲೆಕ್ಷನ್ ಡಿಪಾರ್ಟ್‌ಮೆಂಟ್: 193 ಕೇಸ್ ಕೇವಲ 2 ಶಿಕ್ಷೆ ಎಂದು ಅಂಕಿ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿರುವುದು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿರುವ...








