ಗಮನಿಸಿ.. ಬೆಂಗಳೂರಲ್ಲಿ ಯಾವುದೇ ಭೂಕಂಪನ ಆಗಿಲ್ಲ Bangalore saaksha tv
ಬೆಂಗಳೂರು : ಸಿಲಿಕಾನ್ ಸಿಟಿಯ ಆರ್.ಆರ್ ನಗರ, ನಾಗರಭಾವಿ, ಕೆಂಗೇರಿ, ಯಶವಂತಪುರ, ಕಗ್ಗಲಿಪುರ, ಹೆಮ್ಮಿಗೆಪುರ, ಜ್ಞಾನಭಾರತಿ, ಉಲ್ಲಾಳ ಸೇರಿದಂತೆ ಹಲವೆಡೆ ಭೂಕಂಪನವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಆದ್ರೆ ನಗರದಲ್ಲಿ ಯಾವುದೇ ಭೂಕಂಪನವಾಗಿಲ್ಲ ಎಂದು ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರ ಸ್ಪಷ್ಟೀಕರಣ ನೀಡಿದೆ.
ಇಂದು ಮಧ್ಯಾಹ್ನ 12:15ರ ಸುಮಾರಿಗೆ 10 ರಿಂದ 15 ನಿಮಿಷಗಳ ಅಂತರದಲ್ಲಿ ನಗರದ ಆರ್.ಆರ್ ನಗರ, ನಾಗರಭಾವಿ, ಕೆಂಗೇರಿ, ಯಶವಂತಪುರ, ಜ್ಞಾನಭಾರತಿ, ಉಲ್ಲಾಳ ಭಾಗದಲ್ಲಿ ದೊಡ್ಡ ಶಬ್ಧ ಕೇಳಿ ಬಂದಿತ್ತು. ಇದರಿಂದ ಜನರು ಆತಂಕಗೊಂಡಿದ್ದರು.
ಇದೀಗ ಇದರ ಬಗ್ಗೆ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರ ಸ್ಪಷ್ಟೀಕರಣ ನೀಡಿದ್ದು, ಸ್ಥಳೀಯರಿಗೆ ಆದ ಕಂಪನದ ಅನುಭವ ಕುರಿತಂತೆ ವರದಿಯನ್ನು ಸ್ವೀಕರಿಸಲಾಗಿದೆ.
ಇಂದು ಬೆಳಗ್ಗೆ 11.50 ರಿಂದ 12.15ರವರೆಗೆ ಯಾವುದೇ ಭೂಕಂಪನ ಸಂಭವಿಸಿಲ್ಲ.
ಈ ಅವಧಿಯಲ್ಲಿ ಉಂಟಾಗಿರುವುದು ನಿಗೂಢ ಶಬ್ದವಷ್ಟೇ ಎಂದು ವಿಶ್ಲೇಷಿಸಲಾಗಿರುವುದಾಗಿ ಪ್ರಾಕೃತಿಕ ವಿಕೋಪ ನಿರ್ವಹಣಾ ನಿರ್ದೇಶಕರು ತಿಳಿಸಿದ್ದಾರೆ.