ಮನಸಿಗೆ ನೋವಾಗಿದ್ದರೆ ಬಹಿರಂಗವಾಗಿ ಕ್ಷಮೆ ಕೇಳಲು ಯಾವ ಮುಜುಗರವೂ ಇಲ್ಲ : ರಮೇಶ್ ಕುಮಾರ್ Ramesh Kumar saaksha tv
ಬೆಂಗಳೂರು : ಮಹಿಳೆಯರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಕೆ.ಆರ್.ರಮೇಶ್ ಕುಮಾರ್ ಇಂದು ವಿಧಾನಸಭೆಯಲ್ಲಿ ಬಹಿರಂಗ ಕ್ಷಮೆ ಯಾಚಿಸಿದ್ದಾರೆ.
ನಿನ್ನೆ ಸದನದಲ್ಲಿ ರೈತರ ಸಮಸ್ಯೆ ವಿಚಾರವಾಗಿ ಮಾತನಾಡುತ್ತಾ ಒಂದು ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಲೆಟ್ಸ್ ಎಂಜಾಯ್ ದ ಸಿಚುಯೇಶನ್ ಎಂದರು. ಆಗ ರಮೇಶ್ ಕುಮಾರ್ ಅವರು ಮಧ್ಯ ಪ್ರವೇಶಿಸಿ, ಯಾವಾಗ ರೇಪ್ ಅನಿವಾಯರ್ಯ ಆಗುತ್ತೋ ಆಗ ಮಲಗಿ ಆನಂದಿಸಬೇಕು ಎಂದು ಇಂಗ್ಲೀಷ್ನ ನುಡಿಯೊಂದನ್ನು ಪ್ರಸ್ತಾಪಿಸಿದರು.
ಇದಕ್ಕೆ ರಾಜ್ಯವ್ಯಾಪಿ ವಿರೋಧ ವ್ಯಕ್ತವಾಗಿದ್ದು, ಇಂದು ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಸ್ವಯಂಪ್ರೇರಿತರಾಗಿ ಹೇಳಿಕೆ ನೀಡಿದ ರಮೇಶ್ ಕುಮಾರ್ ಅವರು, ನಾನು ಯಾರಿಗೂ ಯಾವುದೇ ರೀತಿಯಲ್ಲೂ ,ಮನಸಿಗೆ ನೋವುಂಟು ಮಾಡುವ ಉದ್ದೇಶದಿಂದ ಹೇಳಿಕೆ ಕೊಟ್ಟಿಲ್ಲ. ಅಚಾನಕ್ ಆಗಿ ಹೇಳಿದ್ದೇನೆ. ನನ್ನ ಹೇಳಿಕೆಯಿಂದ ಯಾರ ಮನಸಿಗೆ ನೋವಾಗಿದ್ದರೆ ಬಹಿರಂಗವಾಗಿ ಕ್ಷಮೆ ಕೇಳಲು ಯಾವ ಮುಜುಗರವೂ ಇಲ್ಲ. ಯಾವ ಪ್ರತಿಷ್ಠೆಯೂ ಅಡ್ಡ ಬರುವುದಿಲ್ಲ ಎಂದರು.