ನನ್ನ ಹೆಸರಲ್ಲಿ ‘ಶಿವ’, ಸಿದ್ದರಾಮಯ್ಯ ಹೆಸರಲ್ಲಿ ‘ರಾಮ’ನಿದ್ದಾನೆ : ಡಿಕೆಶಿ dk shivakumar
ಶಿವಮೊಗ್ಗ: ನನ್ನ ಹೆಸರಲ್ಲಿ ‘ಶಿವ’ನಿದ್ದರೆ, ಸಿದ್ದರಾಮಯ್ಯ ಹೆಸರಲ್ಲಿ ‘ರಾಮ’ನಿದ್ದಾನೆ. ಹಾಗಾಗಿ ನಾವೆಲ್ಲಾ ಶ್ರೀರಾಮನ ಮಕ್ಕಳೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶಿವಮೊಗ್ಗ ಚಲೋ ಸಮಾವೇಶಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ dk shivakumar, ನಾವು ಕೂಡ ಹಿಂದುಗಳೆ.
ರಾಮನ ಭಕ್ತರೆ. ನನ್ನ ಹೆಸರಲ್ಲಿ ‘ಶಿವ’ನಿದ್ದರೆ, ಸಿದ್ದರಾಮಯ್ಯ ಹೆಸರಲ್ಲಿ ‘ರಾಮ’ನಿದ್ದಾನೆ.
ಹಾಗಾಗಿ ನಾವೆಲ್ಲಾ ಶ್ರೀರಾಮನ ಮಕ್ಕಳು ಎಂದು ಹೇಳಿ, ರಾಮ ಕೇವಲ ಬಿಜೆಪಿಗೆ ಮಾತ್ರ ಸೇರಿದವನಾ? ಎಂದು ಪ್ರಶ್ನಿಸಿದರು.
ಮುಂದುವರಿದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಡಿ.ಕೆ.ಶಿವಕುಮಾರ್, ನಮ್ಮ ಕಾರ್ಯಕರ್ತ ಮೇಲೆ ಕಿರುಕುಳ ನೀಡಲು ಬಿಜೆಪಿ ಪ್ರಯತ್ನಿಸುತ್ತಿದೆ.
ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡು ಭದ್ರಾವತಿಯಲ್ಲಿ ನಮ್ಮ ಶಾಸಕ ಬಿ.ಕೆ.ಸಂಗಮೇಶ್ವರರ ಮೇಲೆ ಕೇಸು ಹಾಕಿದೆ ಎಂದು ಆರೋಪಿಸಿದ್ದಾರೆ.









