ಪ್ಯಾರಿಸ್ ಒಲಿಂಪಿಕ್ಸ್ ಗೆ ನಾಳೆಯಿಂದ ಚಾಲನೆ ಸಿಗಲಿದೆ. ಇದಕ್ಕೂ ಮುನ್ನ ಈಗಾಗಲೇ ಹಲವು ಕ್ರೀಡೆಗಳು ಆರಂಭವಾಗಿದ್ದು, ಭಾರತೀಯರ ಅಭಿಯಾನ ಕೂಡ ಅರ್ಚರಿಯಲ್ಲಿ ಆರಂಭವಾಗಿದೆ.
ಈ ಮಧ್ಯೆ ಹಿಂದಿನ ಬಾರಿ ಕೆಲವು ಆಟಗಾರರೂ ಕೂದಲೆಳೆಯಲ್ಲಿ ಪದಕ ವಂಚತಿರಾಗಿದ್ದು, ದೇಶಕ್ಕೆ ನೋವು ನೀಡಿತ್ತು. 2016ರ ರಿಯೊ ಒಲಿಂಪಿಕ್ಸ್ ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಭಾರತೀಯ ಕ್ರೀಡಾಪಟುಗಳು, 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ 7 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದರು. ಇದು ದಾಖಲೆಯ ಪದಕ ನೀಡಿದ ಕೂಟವಾಗಿವೆ. ಈ ಬಾರಿ ಭಾರತದಿಂದ ಒಟ್ಟು 117 ಸ್ಪರ್ಧಿಗಳು ಕ್ರೀಡಾ ಗ್ರಾಮಕ್ಕೆ ತೆರಳಿದ್ದಾರೆ. ಈ ಕೂಟದಲ್ಲಿ ಭಾರತೀಯ ಆಟಗಾರರಿಂದ ದಾಖಲೆ ನಿರ್ಮಾಣವಾಗಲಿ ಎಂದು ಇಡೀ ದೇಶವೇ ಪ್ರಾರ್ಥಿಸುತ್ತಿದೆ.
2008 ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಭಾರತೀಯ ಅಥ್ಲೀಟ್ ಒಬ್ಬರು ವೈಯಕ್ತಿಕ ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ರಾಜ್ಯವರ್ಧನ್ ಸಿಂಗ್ ರಾಥೋಡ್ 2004 ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಕ್ರೀಡೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು ಮತ್ತು ನಾರ್ಮನ್ ಪ್ರಿಚರ್ಡ್ 1900 ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಕ್ರೀಡೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 1952ರ ಹೆಲ್ಸಿಂಕಿ ಒಲಿಂಪಿಕ್ಸ್ ನಂತರ ಸುಶೀಲ್ ಕುಮಾರ್ ಮೊದಲ ಬಾರಿಗೆ ಕುಸ್ತಿಯಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದರು.
ವಿಜೇಂದರ್ ಸಿಂಗ್ ಬಾಕ್ಸಿಂಗ್‌ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಬಾಕ್ಸಿಂಗ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು. 2018ರಲ್ಲಿ ಭಾರತ ತನ್ನ ಒಲಿಂಪಿಕ್ ಇತಿಹಾಸದಲ್ಲಿ 1 ಚಿನ್ನ ಮತ್ತು 2 ಕಂಚಿನೊಂದಿಗೆ ಅತಿ ಹೆಚ್ಚು ಪದಕ ಗೆದ್ದ ದಾಖಲೆಯನ್ನೂ ಮಾಡಿತ್ತು. ಇದಕ್ಕೂ ಮುನ್ನ ಭಾರತ 1900 ಮತ್ತು 1952ರಲ್ಲಿ ತಲಾ ಎರಡು ಪದಕಗಳನ್ನು ಗೆದ್ದಿತ್ತು., 2012ರ ಲಂಡನ್ ಒಲಿಂಪಿಕ್ಸ್‌ನಲ್ಲೂ ಈ ದಾಖಲೆ ಮುರಿದಿದ್ದು, ಇದರಲ್ಲಿ ಭಾರತೀಯ ಅಥ್ಲೀಟ್‌ಗಳು 2 ಬೆಳ್ಳಿ ಮತ್ತು 4 ಕಂಚು ಸೇರಿದಂತೆ ಒಟ್ಟು 6 ಪದಕ ಗೆದ್ದಿದ್ದರು.
ಅಭಿನವ್ ಬಿಂದ್ರಾ, ಸುಶೀಲ್ ಕುಮಾರ್ ಮತ್ತು ವಿಜೇಂದರ್ ಸಿಂಗ್ ಈ ಮೂವರು ಅಥ್ಲೀಟ್‌ಗಳು ಬೀಜಿಂಗ್ ಒಲಿಂಪಿಕ್ಸ್‌ನ ಪೋಸ್ಟರ್ ಬಾಯ್ಸ್ ಆಗಿ ಸಾಕಷ್ಟು ಸುದ್ದಿ ಮಾಡಿದ್ದರು. ಆದರೆ, ಕೆಲವು ಅಥ್ಲೀಟ್‌ಗಳು ಪದಕದ ಸಮೀಪ ಬಂದರೂ ಅದನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಡೋಲಾ ಬ್ಯಾನರ್ಜಿ, ಬೊಂಬೆಲಾ ದೇವಿ ಮತ್ತು ಪ್ರಣಿತಾ ವರ್ಧನೇನಿ ಅವರನ್ನೊಳಗೊಂಡ ಭಾರತದ ಆರ್ಚರಿ ತಂಡವು ಕ್ವಾರ್ಟರ್‌ಫೈನಲ್‌ಗೆ ತಲುಪಿತ್ತು. ಗೀತಾ ಮಂಜಿತ್ ಕೌರ್, ಸೀನಿ ಜೋಸ್, ಚಿತ್ರಾ ಸೋಮನ್ ಮತ್ತು ಮಂದೀಪ್ ಕೌರ್ ಅವರು 400 ಮೀಟರ್ಸ್ ಮತ್ತು ರಿಲೇ ಓಟದ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.
ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕ್ವಾರ್ಟರ್ ಫೈನಲ್‌ವರೆಗೂ ಅದ್ಭುತ ಪ್ರದರ್ಶನ ನೀಡಿದ್ದರು. ಬಾಕ್ಸರ್‌ಗಳಾದ ಜಿತೇಂದ್ರ ಕುಮಾರ್ ಮತ್ತು ಅಖಿಲ್ ಕುಮಾರ್, ಶೂಟರ್ ಗಗನ್ ನಾರಂಗ್ ಮತ್ತು ಟೆನಿಸ್ ಜೋಡಿ ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್ ಕೂಡ ಕ್ವಾರ್ಟರ್ ಫೈನಲ್‌ನಲ್ಲಿ ಸೋಲನುಭವಿಸಿದರು. ಭಾರತೀಯ ಹಾಕಿ ತಂಡವು ಇದುವರೆಗೆ 8 ಚಿನ್ನ ಸೇರಿದಂತೆ ಒಟ್ಟು 12 ಪದಕಗಳನ್ನು ಗೆದ್ದಿದೆ. ಆದರೆ ಬೀಜಿಂಗ್ ಒಲಿಂಪಿಕಿಸ್ ತಂಡ ಕಳಪೆ ಪ್ರದರ್ಶನ ನೀಡಿತ್ತು. ವೇಟ್ ಲಿಫ್ಟಿಂಗ್ನಲ್ಲೂ ಭಾರತ ಹಿನ್ನಡೆ ಅನುಭವಿಸಿತ್ತು.







