ಇನ್ನೇನು ಐಪಿಎಲ್ ಕೊನೆಯ ಘಟಕ್ಕೆ ಬಂದು ನಿಂತಿದೆ. ಇದು ಮುಗಿಯುತ್ತಿದ್ದಂತೆ ಜೂ. 2ರಂದು ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಈ ಬಾರಿ ಕೂಡ ಬದ್ಧ ವೈರಿಗಳಾದ ಬಾರತ ಹಾಗೂ ಪಾಕ್ ಮುಖಾಮುಖಿಯಾಗಲಿದ್ದು, ಭದ್ರತೆಯ ದೃಷ್ಟಿಯಿಂದ ಹಲವು ನಿಯಮ ಜಾರಿಗೆ ತರಲಾಗಿದೆ.
ಈ ಬಾರಿಯ ವಿಶ್ವಕಪ್ ನ ಆತಿಥ್ಯವನ್ನು ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ವಹಿಸಿಕೊಂಡಿವೆ. ಭಾರತ ತಂಡದ ಅಭಿಯಾನ ಜೂ. 5ರಿಂದ ಆರಂಭವಾಗಲಿದೆ. ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಾಗಿದೆ.
ಭಾರತ ಹಾಗೂ ಪಾಕ್ ವಿರುದ್ಧದ ಹೈವೋಲ್ಟೇಜ್ ಪಂದ್ಯ ಜೂನ್ 9 ರಂದು ನಡೆಯಲಿದೆ. ಈ ಪಂದ್ಯಕ್ಕಾಗಿ ನ್ಯೂಯಾರ್ಕ್ ನ ನಸ್ಸೌ ಕೌಂಟಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸಜ್ಜಾಗಿ ನಿಂತಿದೆ. ಆದರೆ, ಈ ಮೈದಾನದಲ್ಲಿ ಕೇವಲ 34 ಸಾವಿರ ಆಸನಗಳಿಗೆ ಮಾತ್ರ ಅವಕಾಶವಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಹಲವರು ಟಿಕೆಟ್ ರೀ ಸೇಲ್ ಮಾಡುತ್ತಿದ್ದಾರೆ.
ರೀ ಸೇಲ್ ವೇದಿಕೆಗಳಲ್ಲಿ ಬರೋಬ್ಬರಿ 33 ಲಕ್ಷ ರೂ.ಗಳಿಗೆ ದರ ಹೆಚ್ಚಿಸಲಾಗಿದೆ ಎನ್ನಲಾಗಿದೆ. ಕನಿಷ್ಠ ಬೆಲೆಯ ಟಿಕೆಟ್ ಗಳು 1 ಲಕ್ಷ ರೂ.ಗಿಂತ ಅಧಿಕ ಮೊತ್ತಕ್ಕೆ ಮಾರಾಟವಾಗುತ್ತಿವೆ. ಆಸನ ವ್ಯವಸ್ಥೆ ಕಡಿಮೆ ಇರುವ ಕ್ರೀಡಾಂಗಣದಲ್ಲಿ ಪಂದ್ಯ ನಡೆಸುತ್ತಿರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.