ಬಾಲಿವುಡ್ ಅಂಗಳದಲ್ಲಿ ದೀಪಿಕಾ ಪಡುಕೋಣೆ ಭಾರೀ ಸದ್ದು ಮಾಡುತ್ತಿದ್ದಾರೆ. ಆದರೆ, ವಿದೇಶಗಳಲ್ಲಿ ಇವರು ಯಾರು ಅಂತಾನೇ ಗೊತ್ತಿಲ್ಲವಂತೆ.
ಹಾಲಿವುಡ್ ಸಿನಿಮಾಗಳಲ್ಲಿ ಕೂಡ ನಟಿ ಬಣ್ಣ ಹಚ್ಚಿದ್ದಾರೆ. ಅಂತಾರಾಷ್ಟ್ರೀಯ ಫ್ಯಾಷನ್ ಶೋಗಳಲ್ಲಿ ಕೂಡ ಅವರು ಕಾಣಿಸಿಕೊಂಡಿದ್ದಾರೆ. ಆದರೂ ವಿದೇಶದ ಕೆಲವು ಮಂದಿಗೆ ದೀಪಿಕಾ ಪಡುಕೋಣೆ ಯಾರೆಂಬುದೇ ಗೊತ್ತಿಲ್ಲ. ಬಾಫ್ಟಾ ಸಮಾರಂಭದ ರೆಡ್ ಕಾರ್ಪೆಟ್ ಮೇಲೆ ನಟಿ ದೀಪಿಕಾ ಮಿಂಚಿದ್ದು, ಫೋಟೋಗಳು ವೈರಲ್ ಆಗಿವೆ. ಇದನ್ನು ಕಂಡು ವಿದೇಶದ ಕೆಲವು ನೆಟ್ಟಿಗರು ‘ಯಾರು ಇವರು’ ಎಂದು ಪ್ರಶ್ನಿಸಿದ್ದಾರೆ!
ಲಂಡನ್ನಲ್ಲಿ ಬಾಫ್ಟಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ಅದರಲ್ಲಿ ದೀಪಿಕಾ ಪಡುಕೋಣೆ ಅವರು ಭಾಗಿಯಾಗಿದ್ದಾರೆ. ಆಕರ್ಷಕವಾದ ಸೀರೆ ಧರಿಸಿ ಅವರು ಮಿಂಚಿದ್ದಾರೆ. ವೇದಿಕೆಗೆ ಬಂದು ‘ಇಂಗ್ಲಿಷೇತರ ಅತ್ಯುತ್ತಮ ಸಿನಿಮಾ’ ವಿಭಾಗದ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಈ ವೇಳೆ ಅವರ ನೋಟ ಮನಮೋಹಕವಾಗಿದೆ. ಈ ಪೋಟೋ ವೈರಲ್ ಆಗುತ್ತಿದ್ದಂತೆ ವಿದೇಶಿ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಭಾರತೀಯರು ವೈಭವಪೂರಿತ ಕಮೆಂಟ್ ಮಾಡುತ್ತಿದ್ದಾರೆ.