ರಷ್ಯಾ ಸೈನಿಕರು ಗ್ರಾಮಕ್ಕೆ ಪ್ರವೇಶಿಸದಂತೆ ಪ್ರವಾಹ ಸೃಷ್ಠಿಸಿದ ಜನರು
ಉಕ್ರೇನ್: ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗಿ ತಿಂಗಳುಗಳೇ ಕಳೆದಿದ್ದು, ಸಧ್ಯ ಉಕ್ರೇನ್ ನ ರಾಜಧಾನಿ ಕೀವ್ ನ ಉತ್ತರಕ್ಕೆ ಡಿಮಿಡಿವ್ ಎಂಬ ಗ್ರಾಮ ಇಲ್ಲಿ ರಷ್ಯಾದ ಯುದ್ಧ ಟ್ಯಾಂಕರ್ಗಳು ತಮ್ಮ ಗ್ರಾಮಕ್ಕೆ ಬರದಂತೆ ತಡೆಯಲು ಪ್ರವಾಹವನ್ನು ಸೃಷ್ಟಿ ಮಾಡಿದ್ದಾರೆ.
ಗ್ರಾಮದ ಸಮೀಪದ ದಿ.ವಿಪ್ರೋ ನದಿಯಿಂದ ಮೋಟಾರ್ಗಳ ಸಹಾಯದಿಂದ ಹೊಲ, ಗದ್ದೆಗಳಿಗೆ ನೀರು ಹಾಯಿಸಿದ್ದಾರೆ. ಇದರಿಂದ ರಸ್ತೆ, ಹೊಲ, ಮನೆ ಎಲ್ಲವೂ ಜಲಾವೃತಗೊಂಡಿವೆ. ನಮಗೆ ನೋವಾದರೂ ಚಿಂತೆಯಿಲ್ಲ ರಷ್ಯಾದ ಪಡೆಯನ್ನು ಹಿಮ್ಮೆಟ್ಟಿಸುವುದು ನಮ್ಮ ಗುರಿ ಎಂದು ಸ್ಥಳೀಯರು ಹೇಳಿದ್ದಾರೆ.
#Ukraine The residents of Demydiv flooded their village intentionally, along with a vast expanse of fields and bogs around it, creating a quagmire that thwarted a Russian tank assault on Kyiv and bought the army precious time to prepare defenses. pic.twitter.com/7eX1AmsSzP
— Hanna Liubakova (@HannaLiubakova) April 28, 2022
ರಷ್ಯಾದ ಬೆಂಗಾವಲು ಪಡೆಗಳನ್ನು ನಿಯಂತ್ರಿಸಲು ಸೇತುವೆಗಳನ್ನು ನಾಶಪಡಿಸಿದ್ದಾರೆ. ಇದುವರೆಗೂ ದೇಶದ 300ಕ್ಕೂ ಹೆಚ್ಚು ಸೇತುವೆಗಳನ್ನು ಅಲ್ಲಿನ ಜನ ಧ್ವಂಸ ಮಾಡಿದ್ದಾರೆ ಎನ್ನಲಾಗಿದೆ.
ಗ್ರಾಮದ ಪ್ರವಾಹ ಸೃಷ್ಟಿ ಪೋಟೋಗಳನ್ನು ಉಕ್ರೇನ್ ಸರ್ಕಾರದ ಅಧಿಕಾರಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಜಗತ್ತು ಉಕ್ರೇನಿಯನ್ನರ ಹೋರಾಟದ ಶೈಲಿಗೆ ಬೆರಗಾಗಿದ್ದಾರೆ.