ಹಣ ಕದಿಯುವ ಮೊದಲು ದೇವರ ಕಾಲಿಗೆ ಬಿದ್ದು ಪ್ರಾರ್ಥಿಸಿದ ಕಳ್ಳ..!
ಮುಂಬೈ : ಕಳ್ಳನೊಬ್ಬ ದೇವಾಲಯದಲ್ಲಿ ಹುಂಡಿಯನ್ನ ಅಬೇಸ್ ಮಾಡುವ ಮೊದಲು ಭಕ್ತಿಯೊಂದಲೋ ಅಥವ ಭಯದಿಂದಲೋ ದೇವರಿಗೆ ಕೈಮುಗಿದಿದ್ದಾನೆ.. ಆ ನಂತರ ಆಕಡೆ ಈಕಡೆ ಕಣ್ಣು ಹಾಯಿಸಿ ನೋಡಿದೋನೆ ಹುಂಡಿ ಕದ್ದು ಅಲ್ಲಿಂದ ಕಾಲ್ತಿತ್ತಿದ್ದಾನೆ.. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವೈರಲ್ ಆಗ್ತಿದೆ..
ಇಂತಹ ವಿಲಕ್ಷಣ ಘಟನೆ ಮಹಾರಾಷ್ಟ್ರದ ಥಾಣೆ ನಗರದ ದೇವಸ್ಥಾನದಲ್ಲಿ ನಡೆದಿದೆ. ಮಹಾರಾಷ್ಟ್ರದ ಥಾಣೆ ನಗರದ ಖೋಪಾಟ್ ಪ್ರದೇಶದ ಹನುಮಂತ ದೇವಸ್ಥಾನಕ್ಕೆ ನುಗ್ಗಿದ ಕಳ್ಳನೊಬ್ಬ ಹುಂಡಿಯನ್ನು ಕದಿಯಲು ಬಂದಿದ್ದಾನೆ. ಆತ ಹಣ ಕದಿಯುವ ಮುನ್ನ ಹನುಮಾನ್ ದೇವರ ಕಾಲಿಗೆ ಬಿದ್ದು, ಪ್ರಾರ್ಥನೆ ಮಾಡಿದ್ದಾನೆ. ನಂತರ ವಿಗ್ರಹದ ಮುಂದೆ ಇದ್ದ ಹುಂಡಿಯನ್ನು ಕದ್ದು ಪರಾರಿಯಾಗಿದ್ದಾನೆ.
ಪಿಯುಸಿ ಪರೀಕ್ಷೆಯಲ್ಲಿ ಬದಲಾವಣೆ ಮಧ್ಯವಾರ್ಷಿಕಕ್ಕೆ ಪಬ್ಲಿಕ್ ಎಕ್ಸಾಮ್
ದೇವಸ್ಥಾನಕ್ಕೆ ಬೆಳಗ್ಗೆ ಬಂದು ನೋಡಿದ ನಂತರ ಕಳ್ಳತನವಾಗಿರುವುದು ತಿಳಿದುಬಂದಿದೆ. ನಂತರ ಪೊಲೀಸರಿಗೆ ಈ ಮಾಹಿತಿ ತಿಳಿಸಿದ್ದು, ಅವರು ಸಿಸಿಟಿವಿಯನ್ನು ಪರಿಶೀಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಪ್ರಸ್ತುತ ನೌಪದ ಪೊಲೀಸರು ಶನಿವಾರ ಆರೋಪಿಯನ್ನು ಬಂಧಿಸಿದ್ದು, ಆತ ಕದ್ದ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ..