ಬೆಂಗಳೂರು : ಹುಡುಗಿಯರ ಶೋಕಿಗಾಗಿ ಮನೆಗಳ್ಳತನ ಮಾಡುತ್ತಿದ್ದವರು ಅಂದರ್
ಬೆಂಗಳೂರು : ಹುಡುಗಿಯರ ಶೋಕಿಗಾಗಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ವಿಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ..
ಇವರು ಮನೆಗಳ್ಳತನ ಮಾಡ್ತಿದ್ದದ್ದೇ ಮಸಾಜ್ ಪಾರ್ಲರ್ ಗಳಿಗೆ ಹೋಗೊಕೆ. ಮಸಾಜ್ ಪಾರ್ಲರ್ ಗೆ ಹೋಗೋಕೆ ಮನೆಕಳ್ಳತನ ಮಾಡುತ್ತಿದ್ದ ಈ ಆರೋಪಿಗಳನ್ನ ಜಾನ್ ಮೆಲ್ವಿನ್ ಮತ್ತು ಮಂಜುನಾಥ್ ಎಂದು ಗುರುತಿಸಲಾಗಿದೆ..
ಇವರು ಒಂದು ಬಾರಿ ಮಸಾಜ್ ಪಾರ್ಲರ್ ಹೋಗಿ ಹುಡುಗೀರಿಗೆ 10 ರಿಂದ 15 ಸಾವಿರ ಟಿಪ್ಸ್ ಕೊಡ್ತಿದ್ದರಂತೆ. ಮನೆಕಳ್ಳತನ ಮಾಡಿ ಮಸಾಜ್ ಪಾರ್ಲರ್ ಗಳಲ್ಲಿ ಎಂಜಾಯ್ ಮಾಡ್ತಿದ್ದರಂತೆ..
ಐಷರಾಮಿ ಜೀವನ ಮಾಡಲು ಕಳ್ಳತನ ಮಾಡ್ತಿದ್ದ ಆರೋಪಿಗಳು ಇದೀಗ ಕಂಬಿ ಹಿಂದೆ ಬಿದ್ದಿದ್ದಾರೆ.. ಇವರ ಬಳಿಯಿಂದ 16 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ಜೊತೆ ಬೆಳ್ಳಿಯ ಕಾಲು ಚೈನು, ಎರಡು ಬೈಕ್ ಗಳನ್ನ ವಶಕ್ಕೆ ಪಡೆಯಲಾಗಿದೆ.