ಪುತ್ತೂರು ಪೊಲೀಸ್ ಠಾಣೆ ಸಮೀಪದ ಶ್ರೀಧರ್ ಭಟ್ ಜ್ಯುವೆಲ್ಲರ್ಸ್ ಸೇರಿದಂತೆ ನಾಲ್ಕು ಆಭರಣ ಮಳಿಗೆಗಳ ಲೂಟಿ
ಮಾರ್ಚ್ 24 ರ ಬುಧವಾರ ರಾತ್ರಿ ಪುತ್ತೂರು ಪೊಲೀಸ್ ಠಾಣೆ ಬಳಿ ಇರುವ ಒಂದು ಅಂಗಡಿ ಸೇರಿದಂತೆ ನಾಲ್ಕು ಆಭರಣ ಮಳಿಗೆಗಳಿಗೆ ಕಳ್ಳರು ಪ್ರವೇಶಿಸಿ, ಅಂಗಡಿಗಳಿಂದ ಚಿನ್ನದ ಆಭರಣಗಳು, ಬೆಳ್ಳಿ ಮತ್ತು ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿರುವುದು ವರದಿಯಾಗಿದೆ.
ಕಳ್ಳತನ ನಡೆದ ಆಭರಣ ಮಳಿಗೆ ಶ್ರೀಧರ್ ಭಟ್ ಜ್ಯುವೆಲ್ಲರ್ಸ್ ಪುತ್ತೂರಿನ ಎರಡೂ ಪೊಲೀಸ್ ಠಾಣೆಗಳಿಂದ ಕೂಗಳತೆಯ ದೂರದಲ್ಲಿದೆ. ಇದು ಶ್ರೀಧರ್ ಭಟ್ ಮತ್ತು ಬ್ರದರ್ಸ್ ಎಂಬ ವಾಣಿಜ್ಯ ಸಂಕೀರ್ಣದ ಒಂದು ಭಾಗದಲ್ಲಿದ್ದು, ಈ ಸಂಕೀರ್ಣವು ಇಲ್ಲಿನ ಮುಖ್ಯ ರಸ್ತೆಯ ಪಕ್ಕದಲ್ಲಿದೆ.
ರೋಲಿಂಗ್ ಶಟರ್ ಅನ್ನು ಬಲವಂತವಾಗಿ ತೆರೆದ ಕಳ್ಳರು, ಒಳಗೆ ಸ್ಲೈಡ್ ಗೇಟ್ ನ ಬೀಗವನ್ನು ಮುರಿದಿದ್ದಾರೆ. ನಂತರ ಅವರು ಚಿನ್ನದ ಆಭರಣಗಳು ಬೆಳ್ಳಿ ಮತ್ತು ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾರೆ. ಈ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಶ್ರೀಧರ್ ಭಟ್ ಜ್ಯುವೆಲ್ಲರ್ಸ್‌ನಿಂದ 20 ಲಕ್ಷ ರೂ.ಗಳ ಚಿನ್ನವನ್ನು ಲೂಟಿ ಮಾಡಲಾಗಿದೆ ಎಂದು ವರದಿಯಾಗಿದೆ. ಸದರಿ ಜ್ಯುವೆಲ್ಲರ್ಸ್, ಶ್ರೀ ನವಮಿ ಜ್ಯುವೆಲ್ಲರ್ಸ್ ಮತ್ತು ಹಿರಣ್ಯಾ ಮೆಷಿನ್ ಕಟಿಂಗ್ & ಜ್ಯುವೆಲ್ಲರ್ಸ್ ಎಂಬ ಇತರ ಮೂರು ಅಂಗಡಿಗಳಲ್ಲಿ ಕೂಡ ಕಳವು ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ನಗರ ಪೋಲಿಸ್ ಠಾಣೆ ಅಂಗಡಿಯಿಂದ 50 ಮೀಟರ್ ದೂರದಲ್ಲಿದ್ದರೆ, ಮಹಿಳಾ ಠಾಣೆಯು ಇನ್ನೊಂದು ಬದಿಯಲ್ಲಿ 25 ಮೀಟರ್ ದೂರದಲ್ಲಿದೆ. ಸಂಚಾರ ಕೇಂದ್ರವು ಹಿಂಭಾಗದಲ್ಲಿ ಕೇವಲ 25 ಮೀಟರ್ ದೂರದಲ್ಲಿದೆ.ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ಕಿತ್ತಳೆ ಹಣ್ಣಿನ ಆರೋಗ್ಯ ಪ್ರಯೋಜನಗಳು ಮತ್ತು ಕಿತ್ತಳೆ ಹಣ್ಣಿನ ಕೆಲವು ಮನೆಮದ್ದುಗಳು https://t.co/n1HMwioq7j
— Saaksha TV (@SaakshaTv) March 20, 2021
ಮನೆಯಲ್ಲೇ ತಯಾರಿಸಿ ವೆನಿಲ್ಲಾ ಐಸ್ ಕ್ರೀಂ https://t.co/EcO1ByfVci
— Saaksha TV (@SaakshaTv) March 20, 2021
ಜೀವನೋಪಾಯಕ್ಕಾಗಿ ಹೂವು, ಪ್ರಸಾದ ಮಾರುತ್ತಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಹೋದರಿ https://t.co/trMzK8sVSu
— Saaksha TV (@SaakshaTv) March 20, 2021
ಸ್ಯಾಂಡಲ್ ವುಡ್ ನ ಖಳ ಭಯಂಕರನ ಇಬ್ಬರು ಪುತ್ರರತ್ನಗಳ ಸಹೋದರರ ಸವಾಲ್!@TharunSudhir @Kannadacinema24@dasadarshan @SarjaFanshttps://t.co/WksW6tt3n8
— Saaksha TV (@SaakshaTv) March 16, 2021
Thieves loot four jewellery stores including one near police station Puttur