ಅಧಿಕಾರಿಗಳಂತೆ ನಟಿಸಿ 500 ಟನ್ ಕಬ್ಬಿಣದ ಸೇತುವೆ ಕದ್ದ ಕಳ್ಳರು…
ನೀರಾವರಿ ಇಲಾಖೆ ಅಧಿಕಾರಿಗಳಂತೆ ನಟಿಸಿದ ಕಳ್ಳರು 60 ಅಡಿ ಉದ್ದದ 500 ಟನ್‌ನ ಹಳೆಯ ಕಬ್ಬಿಣದ ಸೇತುವೆಯನ್ನು ಕದ್ದಿರುವ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯ ನಸ್ರಿಗಂಜ್‌ನ ಅಮಿಯಾವರ್‌ನಲ್ಲಿ ನಡೆದಿದೆ.
ಕಳ್ಳರು, ಅಧಿಕಾರಿಗಳಂತೆ ನಟಿಸಿ, ಬುಲ್ಡೋಜರ್ ಮತ್ತು ಗ್ಯಾಸ್ ಕಟ್ಟರ್‌ಗಳ ಸಹಾಯದಿಂದ ಇಡೀ ಸೇತುವೆಯನ್ನು ಕತ್ತರಿಸಿ ವಾಹನಗಳಿಗೆ ತುಂಬಿಕೊಂಡು ಹೋಗಿದ್ದಾರೆ.
1972ರಲ್ಲಿ ನಿರ್ಮಿಸಲಾಗಿದ್ದ ಕಬ್ಬಿಣದ ಶಿಥಿಲಗೊಂಡ ಸೇತುವೆಯನ್ನು ನಿರ್ಮಿಸಲಾಗಿದ್ದು, ಕಳ್ಳರು ನೀರಾವರಿ ಇಲಾಖೆಯ ಅಧಿಕಾರಿಗಳಂತೆ ನಟಿಸಿ ಸ್ಥಳೀಯ ಇಲಾಖೆ ಸಿಬ್ಬಂದಿಯ ಸಹಾಯವನ್ನೂ ಪಡೆದು ಇಡೀ ಸೇತುವೆಯನ್ನು ಹಾಡ ಹಗಲಿನಲ್ಲಿ ಕದ್ದಿದ್ದಾರೆ.
ಕಳ್ಳರು ನೀರಾವರಿ ಇಲಾಖೆಯ ಅಧಿಕಾರಿ ಎಂಬ ಸೋಗು ಹಾಕಿಕೊಂಡು ಸಂಪೂರ್ಣ ಸಿದ್ಧತೆಯೊಂದಿಗೆ ಬಂದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲವು ದಶಕಗಳಿಂದ ಶಿಥಿಲಗೊಂಡಿದ್ದ ಈ ಕಬ್ಬಿಣದ ಸೇತುವೆಯನ್ನು ಜನರು ಬಳಸಲಿಲ್ಲ. ಈ ಸೇತುವೆಯನ್ನು ತೆಗೆಯುವಂತೆ ಗ್ರಾಮಸ್ಥರು ಸಹ ಅರ್ಜಿ ಸಲ್ಲಿಸಿದ್ದರು.
ಸುಮಾರು 60 ಅಡಿ ಉದ್ದ, 12 ಅಡಿ ಎತ್ತರದ ಕಬ್ಬಿಣದ ಸೇತುವೆ ಕಳುವಾದಗ ಗ್ರಾಮಸ್ಥರು ಹಾಗೂ ಇಲಾಖೆಗೆ ವಂಚನೆ ಮಾಡಿರುವುದು ಅರ್ಥವಾಗಿತ್ತು. ಬಳಿಕ ಇಲಾಖಾ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ದೂರು ದಾಖಲಾಗಿದೆ ಎಂದು ನೀರಾವರಿ ಇಲಾಖೆಯ ಕಿರಿಯ ಎಂಜಿನಿಯರ್ ಅರ್ಷದ್ ಕಮಲ್ ಶಂಸಿ ತಿಳಿಸಿದ್ದಾರೆ.








