ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ (Paris Olympics) ಭಾರತಕ್ಕೆ (India) ಮೂರನೇ ಪದಕ ಒಲಿದು ಬಂದಿದೆ.
50 ಮೀ. ರೈಫಲ್ 3 ಪೊಸಿಶನ್‌ನಲ್ಲಿ (50m Rifle 3P) ಸ್ವಪ್ನಿಲ್ ಕುಸಾಲೆ (Swapnil Kusale) ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ನಡೆದ ಫೈನಲ್ ಪಂದ್ಯದಲ್ಲಿ ಸ್ವಪ್ನಿಲ್ ಅವರು 451.4 ಅಂಕ ಗಳಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಈ ಬಾರಿ ಗೆದ್ದ ಮೂರು ಕಂಚಿನ ಪದಕಗಳು ಶೂಟಿಂಗ್‌ನಿಂದಲೇ ಬಂದಿರುವುದು ವಿಶೇಷ. ಇದಕ್ಕೂ ಮೊದಲು ಮನು ಭಾಕರ್ (Manu Bhaker)ಎರಡು ಕಂಚಿನ ಪದಕ ಗೆದ್ದಿದ್ದರು. ಮೊದಲ ಪದಕವನ್ನು ವೈಯಕ್ತಿಕವಾಗಿ ಹಾಗೂ ಎರಡನೇ ಪದಕವನ್ನು ಮಿಶ್ರದಲ್ಲಿ ಅವರು ಗೆದ್ದಿದ್ದರು. ಈಗ ಸ್ವಪ್ನಿಲ್ ಮೂರನೇ ಪದಕ ಗೆದ್ದಿದ್ದಾರೆ.








