ADVERTISEMENT
Saturday, March 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ಭಾರತ ಐತಿಹಾಸಿಕ ಜಯ ಕಂಡಿದ್ದು ಹೀಗೆ!

ಹರಿಣಗಳ ನಾಡಿನಲ್ಲಿ ಭಾರತಕ್ಕೆ ಐತಿಹಾಸಿಕ ಜಯ

Author2 by Author2
January 4, 2024
in Sports, ಕ್ರಿಕೆಟ್, ಕ್ರೀಡೆ
Share on FacebookShare on TwitterShare on WhatsappShare on Telegram

ಕೇಪ್‌ಟೌನ್‌: ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾದಲ್ಲಿ ಐತಿಹಾಸಿಕ ಜಯ ಸಾಧಿಸಿದ್ದು, ಮೊದಲ ಸೋಲಿನ ಸೇಡನ್ನು ಕೂಡ ತೀರಿಸಿಕೊಂಡಿದೆ.

ಬೌಲಿಂಗ್ ಬಿಗಿ ದಾಳಿಯಿಂದಾಗಿ ಭಾರತ ಗೆಲುವು ಸಾಧಿಸಿದ್ದು, ಜಸ್ಪ್ರೀತ್‌ ಬುಮ್ರಾ (Jasprit Bumrah), ಮೊಹಮ್ಮದ್‌ ಸಿರಾಜ್‌ ಮಾರಕ ಬೌಲಿಂಗ್‌ ಗೆ ದಕ್ಷಿಣ ಆಫ್ರಿಕಾ ತಂಡ ತತ್ತರಿಸಿ ಹೋಗಿದೆ. ಈ ಮೂಲಕ 2ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ 7 ವಿಕೆಟ್‌ಗಳ ಐತಿಹಾಸಿಕ ಜಯ ಸಾಧಿಸಿದೆ. ಈ ಮೂಲಕ ತವರಿನಲ್ಲಿಯೇ ಹರಿಣರನ್ನು 1-1ರಲ್ಲಿ ಸರಣಿ ಸಮಬಲದಲ್ಲಿ ಬಗ್ಗು ಬಡಿಯಿತು.

Related posts

ನಂಬರ್ 1 ಬ್ಯಾಟರ್ ಅಲ್ಲ ಬರೀ ಫ್ಲಾಪ್ ಶೋ: ಸೆಮಿಫೈನಲ್‌ನಲ್ಲೂ ಮುಗ್ಗರಿಸಿದ ಅಭಿಷೇಕ್ ಶರ್ಮಾ ವಿರುದ್ಧ ಕೆರಳಿದ ಕ್ರಿಕೆಟ್ ಅಭಿಮಾನಿಗಳು

ನಂಬರ್ 1 ಬ್ಯಾಟರ್ ಅಲ್ಲ ಬರೀ ಫ್ಲಾಪ್ ಶೋ: ಸೆಮಿಫೈನಲ್‌ನಲ್ಲೂ ಮುಗ್ಗರಿಸಿದ ಅಭಿಷೇಕ್ ಶರ್ಮಾ ವಿರುದ್ಧ ಕೆರಳಿದ ಕ್ರಿಕೆಟ್ ಅಭಿಮಾನಿಗಳು

March 7, 2026
ರನ್ ಸುನಾಮಿಗೆ ಕೊಚ್ಚಿ ಹೋದ ಇಂಗ್ಲೆಂಡ್: ವಾಂಖೆಡೆಯಲ್ಲಿ ಸಂಜು ಆರ್ಭಟ, ಬೆಥೆಲ್ ಏಕಾಂಗಿ ಹೋರಾಟ ವಿಫಲ,ಫೈನಲ್‌ಗೆ ಲಗ್ಗೆ ಇಟ್ಟ ಭಾರತ

ರನ್ ಸುನಾಮಿಗೆ ಕೊಚ್ಚಿ ಹೋದ ಇಂಗ್ಲೆಂಡ್: ವಾಂಖೆಡೆಯಲ್ಲಿ ಸಂಜು ಆರ್ಭಟ, ಬೆಥೆಲ್ ಏಕಾಂಗಿ ಹೋರಾಟ ವಿಫಲ,ಫೈನಲ್‌ಗೆ ಲಗ್ಗೆ ಇಟ್ಟ ಭಾರತ

March 6, 2026

ಅಲ್ಲದೇ, ಈ ಗೆಲುವಿನ ಮೂಲಕ ರೋಹಿತ್ ಶರ್ಮಾ (Rohit Sharma) ಕೇಪ್‌ಟೌನ್‌ನಲ್ಲಿ ಟೆಸ್ಟ್ ಪಂದ್ಯ ಗೆದ್ದ ಏಷ್ಯಾದ ಮೊದಲ ನಾಯಕ ಎಂಬ ಕೀರ್ತಿ ಗಳಿಸಿದ್ದಾರೆ. ಎಂ.ಎಸ್ ಧೋನಿ ನಂತರ ದಕ್ಷಿಣ ಆಫ್ರಿಕಾದಲ್ಲಿ (South Africa) ಟೆಸ್ಟ್ ಸರಣಿಯನ್ನು ಸಮಬಲಗೊಳಿಸಿದ 2ನೇ ಭಾರತೀಯ ನಾಯಕ ಎಂಬ ಗರಿಮೆ ಕೂಡ ರೋಹಿತ್ ಹೆಸರಿಗೆ ಬಂದಿದೆ.
ಎರಡನೇ ಟೆಸ್ಟ್ ಪಂದ್ಯವು ಕೇವಲ ಎರಡೇ ದಿನಗಳಲ್ಲಿ ಮುಕ್ತಾಯಗೊಂಡಿದೆ. ಈ ಮೂಲಕ ಇದು ಇತಿಹಾಸದಲ್ಲಿಯೇ ಅತ್ಯಂತ ಚುಟುಕು ಪಂದ್ಯ ಎನಿಸಿಕೊಂಡಿದೆ. ಎರಡೂ ಇನ್ನಿಂಗ್ಸ್‌ಗಳಿಂದ ಒಟ್ಟು 642 ಎಸೆತಗಳು ದಾಖಲಾದವು. 1932ರಂದು ಮೆಲ್ಬರ್ನ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ 656 ಎಸೆತಗಳು ಹಾಗೂ 1935ರಲ್ಲಿ ‌ಬ್ರಿಡ್ಜ್‌ಟೌನ್‌ನಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ಇಂಗ್ಲೆಂಡ್‌ ನಡುವಿನ ಪಂದ್ಯದಲ್ಲಿ 672 ಎಸೆತಗಳು ದಾಖಲಾಗಿದ್ದೇ ಇತಿಹಾಸವಾಗಿತ್ತು. ಈ ಮೂಲಕ ಮೊದಲ ಟೆಸ್ಟ್ ನ ಸೇಡನ್ನು ಭಾರತ ತಂಡ ಎರಡನೇ ಪಂದ್ಯದಲ್ಲಿ ತೀರಿಸಿಕೊಂಡಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್‌ ಸಿರಾಜ್‌ ದಾಳಿಗೆ ತುತ್ತಾದ ದಕ್ಷಿಣ ಆಫ್ರಿಕಾ ಕೇವಲ 55 ರನ್‌ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಗುರಿ ಬೆನ್ನಟ್ಟಿದ ಭಾರತ ತಂಡ ಕೂಡ 153 ರನ್‌ಗಳಿಗೆ ಆಲೌಟ್‌ ಆಯಿತು. ಪುನಃ ಇನ್ನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ 36.5 ಓವರ್‌ಗಳಲ್ಲಿ 176 ರನ್‌ಗಳಗೆ ಸರ್ವಪತನ ಕಂಡಿತು. ಹೀಗಾಗಿ ಭಾರತಕ್ಕೆ ಕೇವಲ ಇದರಿಂದ ಟೀಂ ಇಂಡಿಯಾಕ್ಕೆ 79 ರನ್‌ಗಳ ಗುರಿ ಸಿಕ್ಕಿತ್ತು. ಆದರೆ, ಈ ಪಂದ್ಯದಲ್ಲಿ ಏಡನ್‌ ಮಾರ್ಕ್ರಮ್‌ 103 ಎಸೆತಗಳಲ್ಲಿ 2 ಸಿಕ್ಸರ್‌, 17 ಬೌಂಡರಿಯೊಂದಿಗೆ 106 ರನ್‌ ಗಳಿಸಿದರು. ಉಳಿದಂತೆ ಯಾವ ಆಟಗಾರರು ಹೆಚ್ಚಿನ ರನ್ ಗಳಿಸಲು ಪರದಾಡಿದರು.

79 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ, ನಾಯಕ ರೋಹಿತ್‌ ಶರ್ಮಾ ಅವರ ತಾಳ್ಮೆಯ ಬ್ಯಾಟಿಂಗ್‌ನಿಂದ 12 ಓವರ್‌ಗಳಲ್ಲಿಯೇ 3 ವಿಕೆಟ್‌ ಕಳೆದುಕೇಡು 80 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಬುಮ್ರಾ 6 ವಿಕೆಟ್‌ ಪಡೆದರೆ, ಮುಕೇಶ್‌ ಕುಮಾರ್‌ 2, ಸಿರಾಜ್‌ ಹಾಗೂ ಪ್ರಸಿದ್ಧ್‌ ಕೃಷ್ಣ ತಲಾ ಒಂದು ವಿಕೆಟ್ ಪಡೆದರು.

Tags: This is how India saw a historic victory!
ShareTweetSendShare
Join us on:

Related Posts

ನಂಬರ್ 1 ಬ್ಯಾಟರ್ ಅಲ್ಲ ಬರೀ ಫ್ಲಾಪ್ ಶೋ: ಸೆಮಿಫೈನಲ್‌ನಲ್ಲೂ ಮುಗ್ಗರಿಸಿದ ಅಭಿಷೇಕ್ ಶರ್ಮಾ ವಿರುದ್ಧ ಕೆರಳಿದ ಕ್ರಿಕೆಟ್ ಅಭಿಮಾನಿಗಳು

ನಂಬರ್ 1 ಬ್ಯಾಟರ್ ಅಲ್ಲ ಬರೀ ಫ್ಲಾಪ್ ಶೋ: ಸೆಮಿಫೈನಲ್‌ನಲ್ಲೂ ಮುಗ್ಗರಿಸಿದ ಅಭಿಷೇಕ್ ಶರ್ಮಾ ವಿರುದ್ಧ ಕೆರಳಿದ ಕ್ರಿಕೆಟ್ ಅಭಿಮಾನಿಗಳು

by Shwetha
March 7, 2026
0

ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಅತ್ಯಂತ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮತ್ತೊಮ್ಮೆ...

ರನ್ ಸುನಾಮಿಗೆ ಕೊಚ್ಚಿ ಹೋದ ಇಂಗ್ಲೆಂಡ್: ವಾಂಖೆಡೆಯಲ್ಲಿ ಸಂಜು ಆರ್ಭಟ, ಬೆಥೆಲ್ ಏಕಾಂಗಿ ಹೋರಾಟ ವಿಫಲ,ಫೈನಲ್‌ಗೆ ಲಗ್ಗೆ ಇಟ್ಟ ಭಾರತ

ರನ್ ಸುನಾಮಿಗೆ ಕೊಚ್ಚಿ ಹೋದ ಇಂಗ್ಲೆಂಡ್: ವಾಂಖೆಡೆಯಲ್ಲಿ ಸಂಜು ಆರ್ಭಟ, ಬೆಥೆಲ್ ಏಕಾಂಗಿ ಹೋರಾಟ ವಿಫಲ,ಫೈನಲ್‌ಗೆ ಲಗ್ಗೆ ಇಟ್ಟ ಭಾರತ

by Shwetha
March 6, 2026
0

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ರೋಚಕ ಹಾಗೂ ಉಸಿರುಬಿಗಿ ಹಿಡಿಯುವಂತಹ ಪಂದ್ಯಕ್ಕೆ ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣ ಸಾಕ್ಷಿಯಾಗಿದೆ. ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಹಣಾಹಣಿಯಲ್ಲಿ...

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

by Shwetha
March 3, 2026
0

ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತ ತಲುಪಲು ವಿಫಲವಾದ ಹಿನ್ನೆಲೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ತನ್ನ ಆಟಗಾರರ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಟೂರ್ನಿಯಲ್ಲಿ ನಿರಾಶಾಜನಕ ಪ್ರದರ್ಶನ...

ಹುಬ್ಬಳ್ಳಿಯಲ್ಲಿ ಇತಿಹಾಸ ಬರೆದ ಜಮ್ಮು ಕಾಶ್ಮೀರ: 67 ವರ್ಷಗಳ ಬಳಿಕ ರಣಜಿ ಚಾಂಪಿಯನ್, ಆಟಗಾರರಿಗೆ ಹಣದ ಮಳೆ ಸುರಿಸಿದ ಬಿಸಿಸಿಐ ಮತ್ತು ಸಿಎಂ!

ಹುಬ್ಬಳ್ಳಿಯಲ್ಲಿ ಇತಿಹಾಸ ಬರೆದ ಜಮ್ಮು ಕಾಶ್ಮೀರ: 67 ವರ್ಷಗಳ ಬಳಿಕ ರಣಜಿ ಚಾಂಪಿಯನ್, ಆಟಗಾರರಿಗೆ ಹಣದ ಮಳೆ ಸುರಿಸಿದ ಬಿಸಿಸಿಐ ಮತ್ತು ಸಿಎಂ!

by Shwetha
March 1, 2026
0

ಭಾರತೀಯ ದೇಶೀಯ ಕ್ರಿಕೆಟ್ ಅಂಗಳದಲ್ಲಿ ಹೊಸದೊಂದು ಇತಿಹಾಸ ನಿರ್ಮಾಣವಾಗಿದೆ. 2025-26ನೇ ಸಾಲಿನ ರಣಜಿ ಟ್ರೋಫಿ ಫೈನಲ್ ಪಂದ್ಯವು ಕೇವಲ ಒಂದು ಪಂದ್ಯವಾಗಿರದೆ, ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್...

ಏಷ್ಯನ್ ಕ್ರಿಕೆಟ್ ಸಾಮ್ರಾಜ್ಯ ಪತನದ ಅಂಚಿನಲ್ಲಿ ಸೂಪರ್ 8 ಕಾದಾಟದಲ್ಲಿ ಭಾರತ ಪಾಕ್ ಲಂಕಾ ವಿಲವಿಲ

ಏಷ್ಯನ್ ಕ್ರಿಕೆಟ್ ಸಾಮ್ರಾಜ್ಯ ಪತನದ ಅಂಚಿನಲ್ಲಿ ಸೂಪರ್ 8 ಕಾದಾಟದಲ್ಲಿ ಭಾರತ ಪಾಕ್ ಲಂಕಾ ವಿಲವಿಲ

by Shwetha
February 26, 2026
0

ಕ್ರಿಕೆಟ್ ಜಗತ್ತಿನ ಕಿರೀಟದಂತಿದ್ದ ಏಷ್ಯಾ ಖಂಡದ ತಂಡಗಳಿಗೆ ಗ್ರಹಣ ಹಿಡಿದಿದೆಯೇ? 2026ರ ಟಿ20 ವಿಶ್ವಕಪ್ ಕ್ರೀಡಾಂಗಣದಲ್ಲಿ ಸದ್ಯ ನಡೆಯುತ್ತಿರುವ ಹೈಡ್ರಾಮಾ ನೋಡಿದರೆ ಹೌದು ಎನ್ನಲೇಬೇಕು. ವಿಶ್ವ ಕ್ರಿಕೆಟ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram