ಕಲಬುರಗಿ : ರಾಜ್ಯದಲ್ಲಿ ಇರುವುದು ಜನಪ್ರತಿನಿಧಿಗಳ ಸರ್ಕಾರವೇ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಳೆಯಿಂದಾಗಿ ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿ 100 ಕೋಟಿ ರೂಪಾಯಿ ನಷ್ಟವಾಗಿದೆ. ರಾಜ್ಯ ಸರ್ಕಾರದ ಪ್ರಕಾರ ಒಟ್ಟು 700 ಕೋಟಿ ನಷ್ಟವಾಗಿದೆ. ಬರೀ ಮುಂಗಾರು ಬೆಳೆ ಅಷ್ಟೇ ಅಲ್ಲ ಹಿಂಗಾರು ಬೆಳೆ ಸಹ ಬೆಳೆಯಲಾಗುವದಿಲ್ಲ.
ಸಿಎಂ ಬಿಎಸ್ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಆದರೆ ಜನಪ್ರತಿನಿಧಿಗಳ ಜೊತೆ ಚರ್ಚಿಸದೇ ಹೋಗಿದ್ದಾರೆ. ಯಡಿಯೂರಪ್ಪ ಅವರು ಊಟ ಮಾಡಲು ಕಲಬುರಗಿಗೆ ಬಂದು ಹೋಗಿರಬಹುದು. ಇದು ಜನಪ್ರತಿನಿಧಿಗಳ ಸರ್ಕಾರವೇ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡ್ತಿದ್ದಾರೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರುಗಳು ಯಾರು ಕೂಡ ರೈತರಿಗೆ ಸಾಂತ್ವನ ಹೇಳಿ ಪರಿಹಾರ ಕೊಡಿಸಿಲ್ಲ..
ಇದನ್ನೂ ಓದಿ : ಪ್ರೀತಿ ವಿಶ್ವಾಸವನ್ನು ಹಣ, ಅಧಿಕಾರದ ಆಸೆಗೆ ಮಾರಿಕೊಳ್ಳೋಲ್ಲ: ಕುಸುಮಾ
ಸಚಿವರು ಬಾರದ ಹಿನ್ನೆಲೆ ಅಧಿಕಾರಿಗಳು ಸಹ ಕೆಲಸ ಚುರುಕಾಗಿಲ್ಲ. ಕಂದಾಯ ಸಚಿವ ಆರ್.ಅಶೋಕ್ ಕಾಟಚಾರಕ್ಕೆ ಬಂದು ಹೋಗಿದ್ದಾರೆ. ಪಿಕಿನಿಕ್ ತರಹ ಬಂದು ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಸಹ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ರಾಜ್ಯ ಸರ್ಕಾರ ಸಹ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ.
2019ರ ಪರಿಹಾರದ ಹಣ ಸಹ ಇನ್ನೂ ರಾಜ್ಯದಲ್ಲಿ ಕೊಟ್ಟಿಲ್ಲ. ಕೆಲವರಿಗೆ ಕೊಟ್ಟಿದ್ದಾರೆ ಇನ್ನು ಕೆಲವರಿಗೆ ಕೊಟ್ಟಿಲ್ಲ. ಪ್ರವಾಹದಿಂದ ಜನರ ಸಂಕಷ್ಟ ಹಾಗು ಹಣ ಬಿಡಗಡೆ ಫೇಲ್ ಆಗಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ : ಇದು ಧರ್ಮಕ್ಕೂ ಅಧರ್ಮಕ್ಕೂ ನಡೆಯುತ್ತಿರೋ ಚುನಾವಣೆ : ಡಿಕೆಶಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










