ADVERTISEMENT
Friday, July 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ವಿಶ್ವದ ಹಿರಿಯಣ್ಣನಿಗೂ ಈಗ ಭಾರತೀಯ ಮತದಾರರೇ ಬೇಕು; ಕುತೂಹಲ ಕೆರಳಿಸಿರುವ ಈ ಬಾರಿಯ ಅಮೆರಿಕನ್ ಅಧ್ಯಕ್ಷೀಯ ಚುನಾವಣೆ:

admin by admin
August 21, 2020
in International, Newsbeat, ದೇಶ - ವಿದೇಶ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ವಿಶ್ವದ ಹಿರಿಯಣ್ಣನಿಗೂ ಈಗ ಭಾರತೀಯ ಮತದಾರರೇ ಬೇಕು; ಕುತೂಹಲ ಕೆರಳಿಸಿರುವ ಈ ಬಾರಿಯ ಅಮೆರಿಕನ್ ಅಧ್ಯಕ್ಷೀಯ ಚುನಾವಣೆ:

ವಾಷಿಂಗ್ಟನ್‌, ಅಗಸ್ಟ್21: ವಿಶೇಷವಾಗಿ ಈ ಬಾರಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿಂದೆಂದಿಗಿಂತಲೂ ಹೆಚ್ಚಿನ ಕುತೂಹಲ ಸೃಷ್ಟಿಸಿದೆ. ಇದಕ್ಕೆ ಕಾರಣ ಭಾರತ ಮೂಲದ ಅಮೆರಿಕನ್ನರು ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು.‌ ನವೆಂಬರ್ 3 ರಂದು ನಡೆಯಲಿರುವ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಯುಎಸ್ಎ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮೋಕ್ರಾಟಿಕ್ ಅಭ್ಯರ್ಥಿ ಜೋ ಬಿಡನ್ ಇಬ್ಬರೂ ಪ್ರಬಲ ಅಭ್ಯರ್ಥಿಗಳೇ. ಇಬ್ಬರೂ ಭಾರತೀಯ ಮೂಲದ ಅಮೆರಿಕನ್ ಮತದಾರರನ್ನು ತಮ್ಮೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

Related posts

mohammad salah

fifaworldcup-2026: ಫುಟ್‍ಬಾಲ್ ಅಂಗಳದ ಈಜಿಪ್ಟ್ ಚಿರತೆ ಮಹಮ್ಮದ್ ಸಲಾಹ್.. ಆಟದಷ್ಟೇ ಹೃದಯ ಗೆದ್ದ ಮಾಣಿಕ್ಯ..!⚽👑🇪🇬 🐆

July 10, 2026
ಭಾವಿ ಸಿಎಂ ಎಂಬ ಹಣೆಪಟ್ಟಿ ನನಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ -ನನಗೆ ಪಟ್ಟ ಬೇಡ ಜನರ ಪ್ರೀತಿ ಬೇಕು: ಭಾವಿ ಸಿಎಂ ಎಂಬ ಕೂಗಿಗೆ ಚಿತ್ರದುರ್ಗದಲ್ಲಿ ವಿಜಯೇಂದ್ರ ಖಡಕ್ ಪ್ರತಿಕ್ರಿಯೆ

ಭಾವಿ ಸಿಎಂ ಎಂಬ ಹಣೆಪಟ್ಟಿ ನನಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ -ನನಗೆ ಪಟ್ಟ ಬೇಡ ಜನರ ಪ್ರೀತಿ ಬೇಕು: ಭಾವಿ ಸಿಎಂ ಎಂಬ ಕೂಗಿಗೆ ಚಿತ್ರದುರ್ಗದಲ್ಲಿ ವಿಜಯೇಂದ್ರ ಖಡಕ್ ಪ್ರತಿಕ್ರಿಯೆ

July 10, 2026

ಅಮೆರಿಕದ ಇತಿಹಾಸದಲ್ಲೇ ಮೊದಲ ಬಾರಿಗೆ ಹಿಂದೂ ವಾಯ್ಸಸ್ ಫಾರ್ ಟ್ರಂಪ್ ಅಭಿಯಾನವನ್ನು ರಿಪಬ್ಲಿಕನ್ ಪಕ್ಷ ಪ್ರಾರಂಭಿಸಿದರೆ, ಡೆಮಾಕ್ರಟಿಕ್ ನ್ಯಾಷನಲ್ ಕನ್ವೆನ್ಷನ್ ಎಂಬ ಅಭಿಯಾನ ಮತ್ತು ವಿಚಾರ ಸಂಕಿರಣವನ್ನು ಡೆಮಾಕ್ರಟಿಕ್ ಪಕ್ಷ ಪ್ರಾರಂಭಿಸಿದೆ. ಇಲ್ಲಿ ವಿಶೇಷ ಎಂದರೆ ನಿರ್ಣಾಯಕರಾಗೊರುವ ಭಾರತೀಯ ಮೂಲದ ಗ್ರೀನ್ ಕಾರ್ಡ್ ಹೋಲ್ಡರ್ ಮತದಾರರ ಗಮನ ಸೆಳೆಯಲು ಅಮೇರಿಕಾದ ರಿಪಬ್ಲಿಕನ್ ಹಾಗೂ ಡೆಮೋಕ್ರಾಟಿಕ್ ಎರಡೂ ಪಕ್ಷಗಳು ಪ್ರಯತ್ನ ನಡೆಸುತ್ತಿರುವುದು. ಇಬ್ಬರೂ ಅಧ್ಯಕ್ಷೀಯ ಆಕಾಂಕ್ಷಿಗಳಿಗೆ ಭಾರತೀಯ ಮೂಲದ ಮತದಾರರ ಮೇಲೆ ಕಣ್ಣಿದೆ. ಆದ್ರೆ ಭಾರತೀಯ ಆರಿಜನ್ ಮತದಾರ ಪ್ರಭುಗಳು ಯಾರಿಗೆ ಆಶಿರ್ವಾದ ನೀಡುತ್ತಾರೆ ಎನ್ನುವುದೇ ಸದ್ಯದ ಕುತೂಹಲ.

ಸಾಧಾರಣವಾಗಿ ಅಮೆರಿಕ ಚುನಾವಣೆ ಎಂದರೆ ಅಲ್ಲಿನ ಸಮಸ್ಯೆಗಳ ಬಗ್ಗೆ ಮತ್ತು ಅವುಗಳ ಪರಿಹಾರ ಗಳ ಬಗ್ಗೆ ಭಾಷಣಗಳು ಮೊಳಗುತ್ತದೆ. ಆದರೆ ಈ ಬಾರಿ ರಿಪಬ್ಲಿಕನ್ ಪಕ್ಷದ ಅಭಿಯಾನದಲ್ಲಿ ಅಮೆರಿಕ-ಭಾರತ ಸಂಬಂಧ, ಧಾರ್ಮಿಕ ಸ್ವಾತಂತ್ರ್ಯ ಗಳ ಬಗ್ಗೆ ಪ್ರಸ್ತಾಪವಾಗುತ್ತಿದ್ದರೆ, ಡೆಮಾಕ್ರಟಿಕ್ ಚುನಾವಣಾ ಪ್ರಚಾರದಲ್ಲಿ ಎಚ್1ಬಿ ವೀಸಾ ನಿಯಮಗಳ ತಿದ್ದುಪಡಿ, ಹಿಂದೂಗಳ ನಂಬಿಕೆಗೆ ಆದ್ಯತೆ, ವರ್ಣ ಭೇದ ಭಾವಗಳಿಲ್ಲದ ಹೊಸ ಸಮಾಜ ಕಟ್ಟುವಿಕೆ ಇತ್ಯಾದಿ ವಿಚಾರಗಳು ಪ್ರಸ್ತಾಪವಾಗುತ್ತಿದೆ. ಅಷ್ಟೇ ಅಲ್ಲ ಡೆಮೊಕ್ರಾಟಿಕ್ ಪಕ್ಷವು ಕ್ಯಾಲಿಫೋರ್ನಿಯಾ ಸಂಸದೆ ಭಾರತ ಮೂಲದ ಕಮಲಾ ಹ್ಯಾರಿಸ್‌ರನ್ನು ಉಪಾಧ್ಯಕ್ಷ ಅಭ್ಯರ್ಥಿಯಾಗಿಯೂ ಘೋಷಿಸಿದೆ. ಜೊತೆಗೆ ಭಾರತೀಯರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಅವರ ಕುಂದು ಕೊರತೆಗಳನ್ನು ಅಲಿಸುವ ಪೋರಂ ಅನ್ನು ಕೂಡ ಪ್ರಾರಂಭಿಸಿದೆ.

ಇದಕ್ಕೆಲ್ಲಾ ಕಾರಣವಾಗಿರುವುದು ಭಾರತೀಯರು ಅಲ್ಲಿ ನಾಲ್ಕನೇ ಅತಿ ಮುಖ್ಯ ಸಮುದಾಯ ಎನಿಸಿರುವುದು ಮತ್ತು ಚುನಾವಣೆಯಲ್ಲಿ ಅವರ ಮತ ನಿರ್ಣಾಯಕವೆನಿಸಿರುವುದು. ಅಮೆರಿಕದ ಒಟ್ಟು ಜನಸಂಖ್ಯೆಯ ಶೇ.1 ರಷ್ಟು ಭಾರತೀಯರು ಅಲ್ಲಿದ್ದರೂ ಚುನಾವಣೆಯಲ್ಲಿ ಅವರ ಮತ ಪ್ರಾಮುಖ್ಯ ಪಡೆದಿದೆ.‌
ಅಮೆರಿಕದಲ್ಲಿರುವ ಭಾರತೀಯರ ಒಟ್ಟು ಸಂಖ್ಯೆ 38 ಲಕ್ಷ ದಾಟಿದ್ದು, ಅವರ ಒಟ್ಟು ವಾರ್ಷಿಕ ಆದಾಯ ಸರಾಸರಿ 80 ಲಕ್ಷ ರೂ. ಆಗಿದೆ. ಇದು ಅಮೆರಿಕನ್ನರ ವಾರ್ಷಿಕ ಆದಾಯಕ್ಕಿಂತ ಎರಡು ಪಟ್ಟು ಹೆಚ್ಚಿದೆ. ಇಂದು ಅಮೆರಿಕ ವಿಶ್ವದ ನಂಬರ್ ಒನ್ ರಾಷ್ಟ್ರವಾಗಿರಬಹುದು ಆದರೆ ಆ ಯಶಸ್ಸಿನ ಹಿಂದೆ ಭಾರತೀಯ ಶ್ರಮಿಕ ವರ್ಗದ ಪರಿಶ್ರಮವಿದೆ.

ಸಂಶೋಧನೆ, ವೈದ್ಯಕೀಯ, ತಂತ್ರಜ್ಞಾನ, ಮ್ಯಾನೇಜ್‌ಮೆಂಟ್‌, ವೃತ್ತಿಪರ, ಉತ್ಪಾದನೆ, ಸೇಲ್ಸ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಭಾರತೀಯರೇ ಮಂಚೂಣಿಯಲ್ಲಿದ್ದು, ಅಮೆರಿಕದ ಮುನ್ನಡೆಗೆ ಕಾರಣರಾಗಿದ್ದಾರೆ. ಅಷ್ಟೇ ಅಲ್ಲ ಅಮೆರಿಕದಲ್ಲಿರುವ ಭಾರತೀಯರು ಅಭಿಯಾನಗಳನ್ನು, ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತಮ್ಮ ಸಮೂಹದ ಬಲಪದರ್ಶನವನ್ನು ಅಮೆರಿಕದ ರಾಜಕೀಯ ವಲಯಕ್ಕೆ ತೋರಿಸಿದೆ. ಭಾರತೀಯ ಮೂಲದವರನ್ನು ಕಡೆಗಣಿಸಲಾಗದು ಎಂಬ ಅರಿವು ಅಲ್ಲಿನ ರಾಜಕೀಯ ಪಕ್ಷಗಳಿಗೆ ಚೆನ್ನಾಗಿ ತಿಳಿದಿದೆ. 2016ರಲ್ಲಿ ನಡೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕೂಡ ಡೊನಾಲ್ಡ್ ಟ್ರಂಪ್‌ ಗೆಲ್ಲಲು ಭಾರತೀಯ ಸಮೂಹವೇ ಕಾರಣ ಎಂಬುವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಹಾಗಾಗಿ ಈ ಬಾರಿ ಭಾರತೀಯ ಮೂಲದ ಮತದಾರರ ಮನಗೆಲ್ಲಲು ಎರಡು ಪಕ್ಷಗಳು ಪೈಪೋಟಿ ನಡೆಸುತ್ತಿವೆ.

Tags: American presidential electionFormer Vice President Joe BidenIndian votersLatestnewsUS President Donald TrumpUS presidential election
ShareTweetSendShare
Join us on:

Related Posts

mohammad salah

fifaworldcup-2026: ಫುಟ್‍ಬಾಲ್ ಅಂಗಳದ ಈಜಿಪ್ಟ್ ಚಿರತೆ ಮಹಮ್ಮದ್ ಸಲಾಹ್.. ಆಟದಷ್ಟೇ ಹೃದಯ ಗೆದ್ದ ಮಾಣಿಕ್ಯ..!⚽👑🇪🇬 🐆

by admin
July 10, 2026
0

ಒಂದು ಕ್ಷಣ ಕಣ್ಣುಮುಚ್ಚಿ.. ಆಮೇಲೆ ಓದಿ ನೋಡಿ.. ಆಗ ನಿಮ್ಮಲ್ಲೂ ಮೂಡಬಹುದೊಂದು ಭಾವನೆ.. ಹೀಗೂ ಇದೆಯಾ ಅನ್ನೋ ಯೋಚನೆ..! 🚀🔥⚽ ಇದು ಒಂದು ಸಣ್ಣ ಹಳ್ಳಿಯ ಕೆಳ...

ಭಾವಿ ಸಿಎಂ ಎಂಬ ಹಣೆಪಟ್ಟಿ ನನಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ -ನನಗೆ ಪಟ್ಟ ಬೇಡ ಜನರ ಪ್ರೀತಿ ಬೇಕು: ಭಾವಿ ಸಿಎಂ ಎಂಬ ಕೂಗಿಗೆ ಚಿತ್ರದುರ್ಗದಲ್ಲಿ ವಿಜಯೇಂದ್ರ ಖಡಕ್ ಪ್ರತಿಕ್ರಿಯೆ

ಭಾವಿ ಸಿಎಂ ಎಂಬ ಹಣೆಪಟ್ಟಿ ನನಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ -ನನಗೆ ಪಟ್ಟ ಬೇಡ ಜನರ ಪ್ರೀತಿ ಬೇಕು: ಭಾವಿ ಸಿಎಂ ಎಂಬ ಕೂಗಿಗೆ ಚಿತ್ರದುರ್ಗದಲ್ಲಿ ವಿಜಯೇಂದ್ರ ಖಡಕ್ ಪ್ರತಿಕ್ರಿಯೆ

by Shwetha
July 10, 2026
0

ಚಿತ್ರದುರ್ಗ: ರಾಜ್ಯ ರಾಜಕಾರಣದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಚರ್ಚೆಗಳು ಸದಾ ಸುದ್ದಿಯಲ್ಲಿರುತ್ತವೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ನೀಡಿರುವ ಒಂದು ಹೇಳಿಕೆ...

ಇರಾನ್ ಮೇಲೆ ಮತ್ತೆ ಅಮೆರಿಕ ದಾಳಿ?; ಇರಾನ್ ಆರೋಪ, ಅಮೆರಿಕದಿಂದ ಇನ್ನೂ ಪ್ರತಿಕ್ರಿಯೆ ಇಲ್ಲ

ಇರಾನ್ ಮೇಲೆ ಮತ್ತೆ ಅಮೆರಿಕ ದಾಳಿ?; ಇರಾನ್ ಆರೋಪ, ಅಮೆರಿಕದಿಂದ ಇನ್ನೂ ಪ್ರತಿಕ್ರಿಯೆ ಇಲ್ಲ

by Shwetha
July 10, 2026
0

ಇರಾನ್‌ನ ಪ್ರಕಾರ, ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಗೆ ಮುನ್ನ ಮಶ್ಹಾದ್ ನಗರದ ಸಮೀಪದ ರೈಲ್ವೆ ಸೇತುವೆ ಮೇಲೆ ಅಮೆರಿಕ ದಾಳಿ ನಡೆಸಿದ್ದು, ಸೇತುವೆಗೆ ಹಾನಿಯಾಗಿದೆ ಎಂದು...

ಮೇಕೆದಾಟು ಪಾದಯಾತ್ರೆ ಕೇವಲ ಚುನಾವಣಾ ನಾಟಕವೇ?: ತಾಕತ್ತಿದ್ದರೆ ತಮಿಳುನಾಡಿಗೆ ಪಾದಯಾತ್ರೆ ಮಾಡಿ; ಹೈಕಮಾಂಡ್ ಗೆ ಹೆದರಿ ಕನ್ನಡಿಗರ ಹಿತ ಬಲಿಗೊಟ್ಟರಾ ಡಿಕೆಶಿ?-ಡಿಕೆಶಿ ಮೌನದ ವಿರುದ್ಧ ಆರ್ ಅಶೋಕ್ ವಾಗ್ದಾಳಿ!

ಪರಿಶೀಲನೆ ನೆಪದಲ್ಲಿ ಕಾಲಹರಣ ಬೇಡ, ಸಾಲಮನ್ನಾ ಮಾಡಿ ರೈತರನ್ನು ಬದುಕಿಸಿ -ರೈತರ 50 ಸಾವಿರ ರೂಪಾಯಿ ವರೆಗಿನ ಸಾಲ ತಕ್ಷಣ ಮನ್ನಾ ಮಾಡಿ: ರಾಜ್ಯ ಸರ್ಕಾರಕ್ಕೆ ಆರ್ ಅಶೋಕ್ ಒತ್ತಾಯ

by Shwetha
July 10, 2026
0

ಬೆಂಗಳೂರು: ರಾಜ್ಯದಲ್ಲಿ ಬರಗಾಲ ಮತ್ತು ಪ್ರವಾಹದಿಂದ ಕಂಗಾಲಾಗಿರುವ ರೈತರ ನೆರವಿಗೆ ತಕ್ಷಣವೇ ಧಾವಿಸಬೇಕು ಎಂದು ಒತ್ತಾಯಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಸಂಕಷ್ಟದಲ್ಲಿರುವ ಅನ್ನದಾತರ...

ಪದವಿ, PG ಕಾಲೇಜುಗಳಲ್ಲಿ ವಾರಕ್ಕೆ 4 ಗಂಟೆ ಕನ್ನಡ ಕಡ್ಡಾಯಕ್ಕೆ ಶಿಫಾರಸು

ಪದವಿ, PG ಕಾಲೇಜುಗಳಲ್ಲಿ ವಾರಕ್ಕೆ 4 ಗಂಟೆ ಕನ್ನಡ ಕಡ್ಡಾಯಕ್ಕೆ ಶಿಫಾರಸು

by Shwetha
July 10, 2026
0

ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯದ ಎಲ್ಲಾ ಪದವಿ ಹಾಗೂ ಸ್ನಾತಕೋತ್ತರ (PG) ಕಾಲೇಜುಗಳಲ್ಲಿ ವಾರಕ್ಕೆ 4 ಗಂಟೆಗಳ ಕನ್ನಡ ಬೋಧನೆಯನ್ನು ಕಡ್ಡಾಯಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram