ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಸೋಂಕು ಹರಡುವುದನ್ನು ತಡೆಯಲು ನೂರಾರು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ. ಕೆಲವು ಕಡೆ ಕ್ವಾರಂಟೈನ್‍ಲ್ಲಿದ್ದವರು ಅನವಶ್ಯಕವಾಗಿ ಓಡಾಡುತ್ತಿದ್ದು, ಕೇಸ್ ಹಾಕಲಾಗುವುದು ಎಂದು ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ವಿವಿಧ ಪ್ರಕರಣದಲ್ಲಿ 21ಕೇಸ್ ದಾಖಲಾಗಿದೆ. ಎಲ್ಲರೂ ಕ್ವಾರೈಂಟೈನ್‍ಗು ಮೊದಲೇ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಆದರೂ ಕೆಲವರು ಹೊರಗೆ ಬರುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಈಗಾಗಲೇ ಬುದ್ದಿವಾದ ಹೇಳಲಾಗಿದೆ. ಮುಂದೆ ಇದು ಹೀಗೆ ಮುಂದುವರೆದರೆ ಅಂತವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇಬ್ಬರು ಬಿಎಂಟಿಸಿ ನೌಕರರಿಗೆ ಕೊರೊನಾ ಪಾಸಿಟಿವ್
ಬೆಂಗಳೂರಿನಲ್ಲ ಬಿಎಂಟಿಸಿ ಬಸ್‍ಗಳಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಅವರ ಸ್ವಂತ ಊರು ನಂಜನಗೂಡು ತಾಲೂಕಿನ ಅಂಡೂನಳ್ಳಿ ಗ್ರಾಮದ ಬೀದಿಯನ್ನು ಕಂಟೋನ್ಮೆಂಟ್ ಜೋನ್ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದ್ದಾರೆ.
ಪ್ರತಿದಿನ 450 ರಿಂದ 500 ಜನಕ್ಕೆ ಟೆಸ್ಟಿಂಗ್ ನಡೆಯುತ್ತಿದೆ. ಮಹಾರಾಷ್ಟ್ರದಿಂದ ಬಂದ 115 ಜನ ಕ್ವಾರಂಟೈನ್‍ಲಿ ಇದ್ದಾರೆ. ಇತರೆ ರಾಜ್ಯದಿಂದ ಬರುವವರಿಗೆ ಪಾಸಿಟಿವ್ ಬರುತ್ತಿರುವು ಪ್ರಮಾಣ ಕಡಿಮೆ ಇದೆ. ಈ ಬಗ್ಗೆ ಜನರು ಜಾಗೃತಿಯಿಂದ ಇರಬೇಕು. ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಬೇಕು ಎಂದು ಅಭಿರಾಮ್ ಜಿ ಶಂಕರ್ ಮನವಿ ಮಾಡಿದರು.