ಉಡುಪಿ : ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಕೋವಿಡ್-19 ನೆಗೆಟಿವ್ ವರದಿ ಕಡ್ಡಾಯ – ತಪ್ಪಿದರೆ ಯಾರ ಮನೆಗೆ ಬಂದಿರುತ್ತಾರೋ ಅವರ ಮೇಲೆ ಕಾನೂನು ಕ್ರಮ
ಉಡುಪಿ ಜಿಲ್ಲೆಗೆ ಮಹಾರಾಷ್ಟ್ರ, ಕೇರಳದಿಂದ ಆಗಮಿಸುವವರು ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಇದನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕೊರೋನಾ ಎರಡನೇ ಅಲೆ ತೀವ್ರಗೊಳ್ಳುತ್ತಿದ್ದು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ಡಿಸಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಜಿ.ಜಗದೀಶ್, ಸಾರ್ವಜನಿಕರಲ್ಲಿ
ಅನಗತ್ಯವಾಗಿ ಓಡಾಡದಂತೆ, ಗುಂಪು ಸೇರದಂತೆ ಕೋರಿದ್ದು, ಮಾಸ್ಕ್ ಧರಿಸುವುದು,ಸಾಮಾಜಿಕ ಅಂತರ ಕಾಪಾಡುವುದು, ಸ್ಪ್ಯಾನಿಟೈಜರ್ ಬಳಸುವುದು ಮುಂತಾದ ಕೋವಿಡ್-19 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆಯನ್ನು ಸಮರ್ಪಕವಾಗಿ ತಡೆಗಟ್ಟಲು ಡಿಸಿ ಜಿ ಜಗದೀಶ್ ಅವರು ಸಾರ್ವಜನಿಕರ ಸಹಕಾರವನ್ನು ಕೋರಿದ್ದಾರೆ.
ಹಬ್ಬ ಹರಿದಿನಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಹಾರಾಷ್ಟ್ರ ಮತ್ತು ಕೇರಳದಿಂದ ಜಿಲ್ಲೆಗೆ ಸಾರ್ವಜನಿಕರು ಆಗಮಿಸುತ್ತಿದ್ದು, ಅವರು ಕಡ್ಡಾಯವಾಗಿ ಕೋವಿಡ್-19 ನೆಗೆಟಿವ್ ವರದಿ ಹೊಂದಿರಬೇಕು. ಕೋವಿಡ್-19 ನೆಗೆಟಿವ್ ವರದಿ ಇಲ್ಲದಿದ್ದರೆ ಯಾರ ಮನೆಗೆ ಅಂತಹವರು ಬಂದಿರುತ್ತಾರೋ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾದಿತು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಬೆಂಗಳೂರಿನಿಂದ ಸಹ ಜಿಲ್ಲೆಗೆ ಜನರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಅಂತಹವರು ಸಹ ಮನೆಯವರ, ಕುಟುಂಬಿಕರ ಮತ್ತು ಊರಿನ ಜನರ ಆರೋಗ್ಯದ ದೃಷ್ಟಿಯಿಂದ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವಂತೆ ಅವರು ವಿನಂತಿಸಿದ್ದಾರೆ.
#covid19 #negativereport
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇಲ್ಲಿದೆ ಇಮ್ಯುನಿಟಿ ಬೂಸ್ಟರ್ ಡ್ರಿಂಕ್ಸ್#Saakshatv #healthtips #ImmunityBoosterDrinks https://t.co/T9iVoNZHuW
— Saaksha TV (@SaakshaTv) April 16, 2021
ಬೂದುಕುಂಬಳಕಾಯಿ ಮಜ್ಜಿಗೆ ಹುಳಿ#Saakshatv #cookingrecipe #Boodukumbalakayi #majjigehuli https://t.co/HGcFk6L8E7
— Saaksha TV (@SaakshaTv) April 16, 2021
ಮಹಾರಾಷ್ಟ್ರದಲ್ಲಿ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ – ಮುಂಬೈ ತೊರೆದು ಬೆಂಗಳೂರಿಗೆ ಹಾರಿದ ದೀಪಿಕಾ – ರಣವೀರ್ ಜೋಡಿ#Maharashtracurfew #DeepikaPadukone https://t.co/kxvhIRddmi
— Saaksha TV (@SaakshaTv) April 16, 2021
ಆವತೀಯತೆ ಆರಂಭದ ಮುಂದುವರೆದ ಭಾಗ..#Saakshatv #aavathiyathe #ವಿಪ್ರಭಾ #ಆವತೀಯತೆ https://t.co/Sr9ri1vMtx
— Saaksha TV (@SaakshaTv) April 19, 2021