ಲಕ್ನೋ: ಮಗಳ ಸೆಕ್ಸ್ ವೀಡಿಯೋ ವೈರಲ್ ಮಾಡುವುದಾಗಿ ಆನ್ ಲೈನ್ ವಂಚಕರು ಕರೆ (Scam Call) ಮಾಡಿ ಬೆದರಿಕೆ ಹಾಕಿದ ಪರಿಣಾಮ ಶಿಕ್ಷಕಿಯೊಬ್ಬರು ಹೃದಯಾಘಾತಕ್ಕೆ (Heart Attack) ಬಲಿಯಾಗಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿ (Agra) ನಡೆದಿದೆ.
ಶಿಕ್ಷಕಿಗೆ ವಂಚಕರು ಕರೆ ಮಾಡಿ ನಿಮ್ಮ ಮಗಳ ಅಶ್ಲೀಲ ವೀಡಿಯೋ ನಮ್ಮ ಹತ್ತಿರ ಇದೆ. 1 ಲಕ್ಷ ರೂ. ಹಣ ವರ್ಗಾಯಿಸದೇ ಇದ್ದರೆ ವೀಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಆತಂಕಕ್ಕೊಳಗಾದ ಮಹಿಳೆಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮಾಲ್ತಿ ವರ್ಮಾ ಸಾವನ್ನಪ್ಪಿರುವ ಮಹಿಳೆ. ಪೊಲೀಸ್ ಅಧಿಕಾರಿಯಂತೆ ವ್ಯಕ್ತಿಯಿಂದ ವಾಟ್ಸಾಪ್ ಕರೆ ಬಂದಿದೆ. ಈ ವೇಳೆ ನಿಮ್ಮ ಮಗಳನ್ನು ಲೈಂಗಿಕ ಕಳ್ಳಸಾಗಣಿಕೆ ಪ್ರಕರಣದಲ್ಲಿ ಬಂಧಿಸಲಾಗಿದೆ. ನಿಮ್ಮ ಮಗಳನ್ನು ಒಳಗೊಂಡ ಅಶ್ಲೀಲ ವೀಡಿಯೋ ಸಿಕ್ಕಿದೆ. ಅದನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ನಂತರ 1 ಲಕ್ಷ ನೀಡದಿದ್ದರೆ ವೈರಲ್ ಮಾಡುತ್ತೇವೆಂದು ಬೆದರಿಕೆ ಹಾಕಿದ್ದಾರೆ. ಆನಂತರ ಮೊಬೈಲ್ ನಂಬರ್ ಪರಿಶೀಲಿಸಿದಾಗ ಅದು ಪಾಕಿಸ್ತಾನದ ನಂಬರ್ ಎಂದು ಗೊತ್ತಾಗಿದೆ.
ಮಗ ಕರೆ ಮಾಡಿ ತಾಯಿಯನ್ನು ಸಮಾಧಾನಪಡಿಸಿ, ಕಾಲೇಜಿನಲ್ಲಿದ್ದ ಸಹೋದರಿಯೊಂದಿಗೆ ಮಾತನಾಡಿದ್ದೇನೆ ಎಂದು ಮಾಹಿತಿ ನೀಡಿದ್ದಾನೆ. ಅಷ್ಟಾದರೂ ತಾಯಿಗೆ ಆತಂಕದಿಂದ ಹೃದಯಾಘಾತವಾಗಿದೆ. ಸದ್ಯ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ವಂಚಕರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.