ಬೆಂಗಳೂರು: ಪಾಪಿಯೊಬ್ಬ ಪೊಲೀಸರು ಎಂದು ಹೇಳಿಕೊಂಡು ದಂಪತಿಯನ್ನು ಹೆದರಿಸಿ ವಂಚನೆ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ನಗರದ ಹೆಚ್ಎಸ್ಆರ್ ಲೇಔಟ್ನ (HSR Layout) 3ನೇ ಸೆಕ್ಷಟ್ ಫ್ಲಾಟ್ನಲ್ಲಿ ಈ ಘಟನೆ ನಡೆದಿದೆ. ಉತ್ತರ ಭಾರತ ಮೂಲದ ದಂಪತಿಗಳು ವಾಸವಾಗಿದ್ದ ಫ್ಲಾಟ್ಗೆ ಪೊಲೀಸರ ಸೋಗಿನಲ್ಲಿ ಆರೋಪಿ ನುಗ್ಗಿದ್ದಾನೆ. ಆನಂತರ ಮನೆಯಲ್ಲಿ ಗಾಂಜಾ ಇಡುತ್ತೇವೆ ಎಂದು ದಂಪತಿಗೆ ಬೆದರಿಕೆ ಹಾಕಿದ್ದಾನೆ. ಬೆಲೆಬಾಳುವ ವಸ್ತುಗಳನ್ನು ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾನೆ. ಆನಂತರ ಮಾಲೀಕ ಸಂಜೀವ್ ಭೋರಾ ಅವರನ್ನು ಕರೆದೊಯ್ದು ಎಟಿಎಂಗಳಿಂದ ಹಣ ಡ್ರಾ ಮಾಡಿಸಿದ್ದಾನೆ. ಅವರ ಪತ್ನಿಯಿಂದಲೂ ಹಾಗೆಯೇ ಮಾಡಿದ್ದಾನೆ.
ಆರೋಪಿ ಒಟ್ಟು 1.50 ಕೋಟಿ ರೂ. ಹಣ ಡ್ರಾ ಮಾಡಿಸಿಕೊಂಡಿದ್ದಾನೆ ಎನ್ನಲಾಗಿದೆ. ಘಟನೆ ನಡೆದ 2 ದಿನಗಳ ನಂತರ ಈ ಕುರಿತು ದಂಪತಿ ದೂರು ದಾಖಲಿಸಿದ್ದಾರೆ. ಹೀಗಾಗಿ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.