ಲವ್ ಮ್ಯಾರೆಜ್ ಮಾಡಿಕೊಂಡ ಅಣ್ಣನನ್ನ ಕೊಚ್ಚಿ ಕೊಂದ ತಮ್ಮಂದಿರು
ಪಾಣಿಪತ್ : ಪ್ರೇಮ ವಿವಾಹ ಮಾಡಿಕೊಂಡ ಹಿನ್ನೆಲೆ ಒಡಹುಟ್ಟಿದ ಅಣ್ಣನನ್ನೇ ಮೂವರು ತಮ್ಮಂದಿರುವ ಕೊಂದಿರುವ ಘಟನೆ ಹರಿಯಾಣದ ಭಗವಾನ್ ಚೌಕ್ ನಲ್ಲಿ ನಡೆದಿದೆ.
ಒಂದೂವರೆ ತಿಂಗಳ ಹಿಂದೆ ಅಣ್ಣ ನೀರಜ್ ಪ್ರೇಮ ವಿವಾಹವಾಗಿದ್ದರು. ಈ ವಿವಾಹದಿಂದಾಗಿ ನೀರಜ್ ಮೇಲೆ ಕುಟುಂಬಸ್ಥರು ಬೇಸರದಿಂದಿದ್ದರು.
ಇದೇ ವಿಚಾರವಾಗಿ ನೀರಜ್ ತಮ್ಮಂದಿರಾದ ಅಜಯ್, ವಿಜಯ್ ಮತ್ತು ಪವನ್ ಅಣ್ಣನ ಮೇಲೆ ಕೋಪಗೊಂಡಿದ್ದರು.
ನಿನ್ನೆ ಇದೇ ಕಾರಣದಿಂದ ಮೂವರು ತಮ್ಮಂದಿರು ಅಣ್ಣನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಚಾಕುವಿನಿಂದ ಮನಸೋ ಇಚ್ಛೆ ಚುಚ್ಚಿ, ಕೊಚ್ಚಿದ್ದಾರೆ.
ಗ್ಯಾಸ್ ರೀಫಿಲ್ ಬುಕ್ಕಿಂಗ್ ಗಾಗಿ ಮಿಸ್ಡ್ – ಕಾಲ್ ಕೊಟ್ರೆ ಸಾಕು
ಘಟನೆಯಲ್ಲಿ ನೀರಜ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನೀರಜ್ ಮೃತಪಟ್ಟಿದ್ದಾನೆ.
ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ಶುರುವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









