ಮೂಡುಬಿದಿರೆ: ಕ್ಷುಲ್ಲಕ ಕಾರಣಕ್ಕೆ ಸ್ವಂತ ಅಣ್ಣನೇ ತಮ್ಮನನ್ನು ಕೊಂದಿರುವ ಘಟನೆ ಕಾರ್ಕಳದ ಕೆಲ್ಲಪುತ್ರಿಗೆಯಲ್ಲಿ ನಡೆದಿದೆ. ರವೀಂದ್ರ ಮೃತ ದುರ್ದೈವಿಯಾಗಿದ್ದಾನೆ. ಭಾನುವಾರ ರಾತ್ರಿ ರವೀಂದ್ರ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಮೃತ ರವೀಂದ್ರ, ಮೃತನ ಅಣ್ಣ ಶ್ರೀನಿವಾಸ್, ಹಾಗೂ ಇವರಿಬ್ಬರ ಭಾವ ಆನಂದ ನಡುವೆ ಜಗಳವಾಗಿದೆ. ಈ ವೇಳೆ ಶ್ರೀನಿವಾಸ್ ಮತ್ತು ಆನಂದ ಇಬ್ಬರು ಸೇರಿ ರವೀಂದ್ರ ಅವರ ಹೊಟ್ಟೆ ಮೇಲೆ ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ. ಇದರಿಂದ ಸ್ಥಳದಲ್ಲೇ ರಕ್ತ ಕಕ್ಕಿ ಅಸ್ವಸ್ಥರಾಗಿದ್ದ ರವೀಂದ್ರ ಅವರನ್ನು ಸ್ಥಳೀಯರು ವೆನ್ಲಾಕ್ ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ರವೀಂದ್ರ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸದ್ಯ ಈ ಸಂಬಂಧ ಪೊಲೀಸರು ಆರೋಪಿಗಳಾದ ಶ್ರೀನಿವಾಸ್ ಹಾಗೂ ಆನಂದ ಅವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ರಾಮನಗರಿಯಲ್ಲೇ ಫೈಸಲಾ ಆಗಲಿ ಧಮ್ ಇದ್ದರೆ ಚುನಾವಣೆಗೆ ನಿಲ್ಲಿ ಎಂದು ಅಖಿಲೇಶ್ ಗೆ ಯೋಗಿ ಆದಿತ್ಯನಾಥ್ ಓಪನ್ ಚಾಲೆಂಜ್
ಉತ್ತರ ಪ್ರದೇಶದ ರಾಜಕೀಯ ರಣಕಣದಲ್ಲಿ ಈಗ ಅಯೋಧ್ಯೆಯ ಕಿಚ್ಚು ಹತ್ತಿಕೊಂಡಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಟೀಕೆಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅತ್ಯಂತ...








