ಗುಡಿಸಿಲಿಗೆ ಬೆಂಕಿ ಬಿದ್ದು ಮೂವರು ಬಾಲಕರ ಸಾವು….
ಗುವಾಹಟಿ: ಅಸ್ಸಾಂನ ಚರೈಡಿಯೊ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಹುಲ್ಲಿನ ಗುಡಿಸಿಲಿಗೆ ಬೆಂಕಿ ಹೊತ್ತಿಕೊಂಡು ಸುಮಾರು 5-6 ವರ್ಷ ವಯಸ್ಸಿನ ಮೂವರು ಬಾಲಕರು ಸಾವನ್ನಪ್ಪಿರು ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಮೊರನ್ಹತ್ ಪೊಲೀಸ್ ಠಾಣೆ ವ್ಯಾಪ್ತಿಯ ಸೆಪೋನ್ನಲ್ಲಿ ಬೆಳಿಗ್ಗೆ 10:30 ರ ಸುಮಾರಿಗೆ ಹುಡುಗರು ‘ಟೋಂಗಿ ಘರ್’ (ಸಾಮಾನ್ಯವಾಗಿ ಹೊಲಗಳಲ್ಲಿ ನಿರ್ಮಿಸಲಾದ ಹುಲ್ಲಿನ ಗುಡಿಸಲು) ಒಳಗೆ ಇದ್ದಾಗ ಈ ಘಟನೆ ನಡೆದಿದೆ.
“ಹುಲ್ಲಿನ ಶೆಡ್ಗೆ ಬೆಂಕಿ ಹತ್ತಿದಾಗ ಸುಮಾರು 5-6 ವರ್ಷ ವಯಸ್ಸಿನ ನಾಲ್ವರು ಹುಡುಗರು ಅದರೊಳಗೆ ಆಟವಾಡುತ್ತಿದ್ದರು. ಅವರಲ್ಲಿ ಒಬ್ಬ ಬಾಲಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ, ಉಳಿದ ಮೂವರು ಸಿಕ್ಕಿಬಿದ್ದಿದ್ದು ಬೆಂಕಿ ಹೊತ್ತಿಕೊಂಡಿದೆ ”ಎಂದು ಚರೈಡಿಯೊ ಪೊಲೀಸ್ ಅಧೀಕ್ಷಕ ಸುಧಾಕರ್ ಸಿಂಗ್ ಹೇಳಿದ್ದಾರೆ.
ಬೆಂಕಿಯಿಂದ ತಪ್ಪಿಸಿಕೊಂಡ ಮಗುವಿನ ಹೇಳಿಕೆಯ ಪ್ರಕಾರ, ಮಕ್ಕಳು ಗುಡುಸಿಲಿನ ಒಳಗೆ ಸಿಗರೇಟ್ ಹಚ್ಚಲು ಪ್ರಯತ್ನಿಸುತ್ತಿದ್ದಾಗ ಒಣಹುಲ್ಲಿನ ಮತ್ತು ಬಿದಿರಿನಿಂದ ಮಾಡಿದ ಗುಡುಸಿಲಿಗೆ ಬೆಂಕಿ ಹತ್ತಿಕೊಂಡಿತು,” ಎಂದು ಬಾಲಕ ಹೇಳಿದ್ದಾನೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.