ಟಿಕೆಟ್‌ ಕೊಡ್ತೀನಿ, ಮಿನಿಸ್ಟರ್ ಆಗು ಡಿಕೆಶಿ  

1 min read
Congress Symbol Saaksha Tv
ಟಿಕೆಟ್‌ ಕೊಡ್ತೀನಿ, ಮಿನಿಸ್ಟರ್ ಆಗು ಡಿಕೆಶಿ Saaksha Tv

ನೆಲಮಂಗಲ: ನೋಡು ಗುರು ಟಿಕೆಟ್‌ ಕೊಡ್ತೀನಿ, ಗೆದ್ದು ಬಂದು ಮಿನಿಸ್ಟರ್‌ ಆಗು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನನಗೆ  ಆರು ತಿಂಗಳ ಹಿಂದೆ ಹೇಳಿದರು. ಎಂದು ಮಾಜಿ ಸಚಿವ ಅಂಜನಮೂರ್ತಿ ಹೇಳಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ (Anjanamurthy) ಮಾತನಾಡಿ, ಈ ಮಾತನ್ನ ಸಿದ್ದರಾಮಯ್ಯನವರು (siddaramaiah) ಜೊತೆಗೆ ಹೇಳಬೇಕು. ಸಿದ್ದರಾಮಯ್ಯ ನಮ್ಮ ನಾಯಕರು, ಇಬ್ಬರು ಜೋಡೆತ್ತು ಹೋದಂಗೆ ಹೋಗಬೇಕಿದೆ. ಪಕ್ಷ ಮುನ್ನಡೆಯೋಕೆ ನಾನು ಮುಂದಿನ ಚುನಾವಣೆಗೆ ಆಕಾಂಕ್ಷಿಯಾಗಿರುವುದಾಗಿ ತಿಳಿಸಿದ್ದಾರೆ. ನಮ್ಮ ಕಾಂಗ್ರೆಸ್‌ ಪಕ್ಷ (Congress) ಸಮುದ್ರ ಇದ್ದಂಗೆ. ಬಿಎಂಎಲ್‌ (BML) ಕಾಂತರಾಜು ಬರೋದ್ರಿಂದ ಪಕ್ಷಕ್ಕೆ ಬಲ ಬರುತ್ತೆ ನಮ್ಮ ಪಕ್ಷಕ್ಕೆ ಯಾರು ಬಂದ್ರು ನಾವು ಸ್ವಾಗತ ಕೋರುತ್ತೇವೆ.

ಆಂಜನಮೂರ್ತಿ ಇತಿಹಾಸದಲ್ಲಿ ಬಂಡಾಯ ಇಲ್ಲ ನನಗೆ ಪಕ್ಷ ಎಲ್ಲವನ್ನೂ ಕೊಟ್ಟಿದ್ದು, ನಾನು ಕಾರ್ಯಕರ್ತರ ಒತ್ತಾಯದ ಮೇರೆಗೆ ನಾಮಪತ್ರ ಸಲ್ಲಿಸಿದ್ದೆ. ನಂತರ ಪಕ್ಷ ಮುಖ್ಯ ಅಂತ ನಾಮಪತ್ರ ವಾಪಸ ತೆಗೆದುಕೊಂಡೆ ಎಂದರು. ಪಕ್ಷದ ತೀರ್ಮಾನವೇ ಅಂತಿಮ, ನಾನು ಪಕ್ಷ ಬಿಡೋ ಮಾತೇ ಇಲ್ಲ. ತಾಲೂಕಿನ ಜನ ನನ್ನ ಕೈಬಿಡೋದಿಲ್ಲ. ನನ್ನ ಜನರ ಮೇಲೆ ನನಗೆ ನಂಬಿಕೆ ಇದೆ. ಇಲ್ಲಿಯೇ ಹುಟ್ಟಿದ ಜನರಿಗೆ ಅವಕಾಶ ಕೊಡಿ, ನೆರೆಯವರಿಗೆ ಅವಕಾಶ ಕೊಡಬೇಡಿ. ಕಳೆದ ಬಾರಿ ನಂಬಿಕೆಗೆ ದ್ರೋಹ ಆಗಿತ್ತು, ಈಗ ನನಗೆ ಹೈ ಕಮಾಂಡ್‌ ಮೇಲೆ ವಿಶ್ವಾಸವಿದೆ ಎಂದಿದ್ದಾರೆ.

ಬೆಂಗಳೂರಿನ (Bengaluru) ಕೋಟಿ ಜನಸಂಖ್ಯೆಗೆ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಿದೆ. ಬೆಂಗಳೂರಿಗೆ ನೀರು ಪೂರೈಸಲು . ನಮ್ಮ ನೀರು ನಮ್ಮ ಹಕ್ಕು ಎನ್ನುವ ಧ್ಯೇಯ ವಾಕ್ಯದಿಂದ ಈ ಯೋಜನೆ ಕೈಗೊಳ್ಳಲಾಗಿದೆ. ಮೇಕೆದಾಟುವಿನಿಂದ ಬೆಂಗಳೂರಿಗೆ ಪಾದಯಾತ್ರೆ ಕಾರ್ಯಕ್ರಮ 9ನೇ ತಾರೀಕಿನಂದು ಶುರುವಾಗಲಿದೆ. ರಾಜ್ಯಾದ್ಯಂತ 60 ಸಾವಿರಕ್ಕೂ ಹೆಚ್ಚು ಜನ ಸೇರೋ ಅವಶ್ಯಕತೆ ಇದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ (DK Shivakumar) ಸಹ ಈ ಯೋಜನೆಗೆ ಕೈಜೋಡಿಸಿದ್ದಾರೆ.

ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಟಿ.ನಾಗರಾಜು, ಉಪಾಧ್ಯಕ್ಷ ಸಿ.ಎಂ.ಗೌಡ್ರು, ಮಹಿಳಾ ಜಿಲ್ಲಾ ಕಾಂಗ್ರೆಸ್‌ (Congress) ಕಾರ್ಯಧ್ಯಕ್ಷೆ ರುಕ್ಮಿಣಿ, ಮುಖಂಡರಾದ ಕೃಷ್ಣಮೂತಿ, ಮೂರ್ತಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd