ಎರಡು ವರ್ಷಗಳ ಬಳಿಕ ಐಪಿಎಲ್ ಪಂದ್ಯಕ್ಕೆ ಪ್ರೇಕ್ಷಕರನ್ನು ಕ್ರೀಡಾಂಗಣದ ಒಳಗೆ ಬಿಡಲಾಗುತ್ತಿದೆ.
ಐಪಿಎಲ್ ಅಂದರೆ ಪ್ರೇಕ್ಷಕರು, ಪ್ರೇಕ್ಷಕರು ಇಲ್ಲದ ಖಾಲಿ ಕ್ರೀಡಾಂಗಣ ಉಪ್ಪಿಲ್ಲದ ಸಾಂಬಾರಿನ ತರಹ ರುಚಿ ಮತ್ತು ಮಜಾ ಇಲ್ಲದ ಐಪಿಎಲ್ ಆಗಿತ್ತು.
ಈಗ ಯುಎಇ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿ ಕ್ರೀಡಾಂಗಣದ ಒಳಗೆ ಅಭಿಮಾನಿಗಳನ್ನು ಬಿಡಲು ಸಿದ್ಧವಾಗಿದೆ.
ಆತಿಥ್ಯ ನೀಡುವ ದುಬೈ, ಶಾರ್ಜಾ ಮತ್ತು ಅಬುಧಾಬಿ ಕ್ರೀಡಾಂಗಣಗಳಲ್ಲಿ ವಿಭಿನ್ನ ನಿಯಮಗಳನ್ನು ಮಾಡಲಾಗಿದೆ.
ಎರಡನೇ ಹಂತದ ಕೆಲವು ಪಂದ್ಯಗಳು ಶಾರ್ಜಾ ಕ್ರೀಡಾಂಗಣದಲ್ಲಿ ನಡೆಯಲಿವೆ.
ಇಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಭಿಮಾನಿಗಳಿಗೆ ಕ್ರೀಡಾಂಗಣ ಪ್ರವೇಶ ನಿಷೇಧಿಸಲಾಗಿದೆ.
ಕ್ರೀಡಾಂಗಣಕ್ಕೆ ಪ್ರವೇಶಿಸುವಾಗ ಅಭಿಮಾನಿಗಳ ದೇಹದ ಟೆಂಪರೇಚರ್ ಪರಿಶೀಲಿಸಲಾಗುತ್ತದೆ.
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣಕ್ಕೆ ಹೋಗಲು ಅಭಿಮಾನಿಗಳು ಆರ್ಟಿ ಪಿಸಿಆರ್ ವರದಿಯನ್ನು ತೋರಿಸುವ ಅಗತ್ಯವಿಲ್ಲ.
12 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಲಸಿಕೆ ಡೋಸ್ ತೆಗೆದುಕೊಂಡ ಪುರಾವೆ ತೋರಿಸಬೇಕು.
12 ವರ್ಷದೊಳಗಿನ ಮಕ್ಕಳು ದುಬೈ ಕ್ರೀಡಾಂಗಣದಲ್ಲಿ ಲಸಿಕೆಯ ಪ್ರಮಾಣಪತ್ರವನ್ನು ತೋರಿಸುವ ಅಗತ್ಯವಿಲ್ಲ.
ಇಡೀ ಸಮಯದಲ್ಲಿ ಕ್ರೀಡಾಂಗಣದಲ್ಲಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ದೂರವನ್ನು ಸಹ ಅನುಸರಿಸಬೇಕು.
ಶಾರ್ಜಾ ಮತ್ತು ಅಬುಧಾಭಿ ದಲ್ಲಿ ವಿಭಿನ್ನ ನಿಯಮಗಳಿವೆ. 16 ವರ್ಷದೊಳಗಿನ ಅಭಿಮಾನಿಗಳಿಗೆ ಶಾರ್ಜಾದಲ್ಲಿ ನಡೆಯಲಿರುವ ಎರಡನೇ ಹಂತದ ಐಪಿಎಲ್ನಲ್ಲಿ ಪ್ರವೇಶ ನೀಡಲಾಗುವುದಿಲ್ಲ.
ಲಸಿಕೆ ವರದಿಯ ಜೊತೆಗೆ, ಇಲ್ಲಿಗೆ ಬರುವ ಅಭಿಮಾನಿಗಳು 48 ಗಂಟೆಗಳ ಹಿಂದೆ ಆರ್ಟಿ-ಪಿಸಿಆರ್ ವರದಿಯನ್ನು ತೋರಿಸಬೇಕಾಗುತ್ತದೆ.
ಇದಲ್ಲದೇ, ಯುಎಇಯ ಎಲ್ ಹೋಸ್ನ್ ಆಪ್ನಲ್ಲಿ ಗ್ರೀನ್ ಬಟನ್ ಆನ್ ಆಗಿರಬೇಕು.
ಒಮ್ಮೆ ಕ್ರೀಡಾಂಗಣವನ್ನು ತೊರೆದರೆ, ಅವನು ಮತ್ತೆ ಒಳಗೆ ಬರಲು ಸಾಧ್ಯವಾಗುವುದಿಲ್ಲ.
ಒಟ್ಟಿನಲ್ಲಿ ಹಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೂ ಅಭಿಮಾನಿಗಳಿಗೆ ಪಂದ್ಯ ನೋಡಲು ಕ್ರೀಡಾಂಗಣದ ಒಳಗೆ ಅನುಮತಿ ನೀಡಿರುವುದು ನಿಜಕ್ಕೂ ಖುಷಿಯ ವಿಚಾರ.