Shimogga | ಕಾರ್ ಗೆ ಟಿಪ್ಪರ್ ಡಿಕ್ಕಿ.. ಇಬ್ಬರು ಸಾವು
ಶಿವಮೊಗ್ಗ ಜಿಲ್ಲೆಯ ಮಾಚೇನಗಳ್ಳಿ ಬಳಿ ಘಟನೆ
ಷಣ್ಮುಗ(39) ರಾಮಚಂದ್ರ(40) ಮೃತ ದುರ್ದೈವಿಗಳು
ಸ್ಥಳಕ್ಕೆ ಪೇಪರ್ ಟೌನ್ ಪೊಲೀಸರು ಭೇಟಿ, ಪರಿಶೀಲನೆ Tipper-car accident 2 people dies in shimogga
ಶಿವಮೊಗ್ಗ : ಕಾರಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಕೊನೆಯುಸಿರೆಳೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಾಚೇನಹಳ್ಳಿ ಸಮೀಪ ನಡೆದಿದೆ. 39 ವರ್ಷದ ಷಣ್ಮುಗ 40 ವರ್ಷದ ರಾಮಚಂದ್ರ ಮೃತ ದುರ್ದೈವಿಗಳಾಗಿದ್ದಾರೆ.
ಟಿಪ್ಪರ್ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಲೇ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶಿವಮೊಗ್ಗದಿಂದ ವೇಗವಾಗಿ ಬಂದ ಟಿಪ್ಪರ್ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದು ಬಳಿಕ ಒನ್ ವೇ ನಲ್ಲಿ ಬರುತ್ತಿದ್ದ ಕಾರ್ ಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಕಾರ್ ನಲ್ಲಿದ್ದ ಷಣ್ಮುಗ, ರಾಮಚಂದ್ರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇನ್ನು ಘಟನೆಯ ಬಳಿಕ ಟಿಪ್ಪರ್ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಇತ್ತ ವಿಷಯ ತಿಳಿದು ಸ್ಥಳಕ್ಕೆ ಪೇಪರ್ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.