ಬಳ್ಳಾರಿ: ಟಿಪ್ಪರ್ ಗೆ ಬೈಕ್ ಡಿಕ್ಕಿಯಾದ ಪರಿಣಾಮ ದಂಪತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಬಳ್ಳಾರಿ(Ballari) ತಾಲೂಕಿನ ಅಮರಾಪುರ ಗ್ರಾಮದ ಹತ್ತಿರ ನಡೆದಿದೆ. ಹೊಸ ದರೋಜಿ ಗ್ರಾಮದ ನಾಗರಾಜ್ (40) ಹಾಗೂ ಪಾರ್ವತಿ (37) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ 8 ವರ್ಷದ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಪತ್ನಿ ಹಾಗೂ 8 ವರ್ಷದ ಗಂಡು ಮಗುವಿನೊಂದಿಗೆ ನಾಗರಾಜ್ ಬಳ್ಳಾರಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಚಳಗುರ್ಕಿ ಗ್ರಾಮದಿಂದ ಮುಂದೆ ಸಾಗುತ್ತಿದ್ದಾಗ ಟಿಪ್ಪರ್ ಗೆ ಲಾರಿ ಡಿಕ್ಕಿಯಾಗಿದೆ.
ಈ ಸಂದರ್ಭದಲ್ಲಿ ನಾಗರಾಜ್ ಹಾಗೂ ಪಾರ್ವತಿ ತಲೆ ಭಾಗಕ್ಕೆ ಬಲವಾದ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ಮಗುವಿಗೆ ಬಳ್ಳಾರಿ ವಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ತಂದೆ-ತಾಯಿ ಕಳೆದುಕೊಂಡ ಮಗು ಅನಾಥವಾಗಿದೆ.