ಬೆಂಗಳೂರು: ಟಿಪ್ಪು ನೆಲದ ಮಗ ಅಂತಲೇ ನಾನು ಜಯಂತಿ ಮಾಡಿದ್ದು ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ್ ಹೇಳಿಕೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಟಿಪ್ಪು ನೆಲದ ಮಗ ಎಂಬ ಹೆಚ್.ವಿಶ್ವನಾಥ್ ಹೇಳಿಕೆಗೆ ವ್ಯಂಗ್ಯವಾಡಿದ ಸಿದ್ದರಾಮಯ್ಯ, ಟಿಪ್ಪು ನೆಲದ ಮಗ ಅಂತಲೇ ನಾನು ಜಯಂತಿ ಮಾಡಿದ್ದು. ವಿಶ್ವನಾಥ್ ಅವರು ಈಗ ಬಿಜೆಪಿಯಲ್ಲಿದ್ದಾರೆ ಅಂತ ಅಂದುಕೊಂಡಿದ್ದೇನೆ. ಹಿರಿಯ ಪರಿಷತ್ ಸದಸ್ಯ ಪಾಪ ಸತ್ಯ ಹೇಳಿದ್ದಾರೆ ಅಂತ ಅಂದುಕೊಂಡಿದ್ದೇನೆ. ಸತ್ಯ ಹೇಳಿದವರಿಂದ ಬಿಜೆಪಿಯವರು ಏನು ವಿವರಣೆ ಕೇಳ್ತಾರೆ ಪಾಪ. ಈಗ ಸತ್ಯ ಹೇಳಿದ ವಿಶ್ವನಾಥ್ ಮುಂದೆಯೂ ಅವರ ಹೇಳಿಕೆಗೆ ಬದ್ಧವಾಗಿರಲಿ ಎಂದರು.
ಇದೇ ವೇಳೆ ಬಿ.ವೈ ವಿಜಯೇಂದ್ರ ಮೇಲೆ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಆರೋಪದ ಬಗ್ಗೆ ಮಾತನಾಡಿದ, ದಾಖಲೆ ಇದ್ದು ಮಾತನಾಡಿದ್ರೆ ಪಕ್ಷದ ಗಮನಕ್ಕೆ ತರಬೇಕು ಅಂತೇನಿಲ್ಲ. ಬಿಜೆಪಿ ಶಾಸಕರು ಸಹಿ ಹಾಕಿರುವ ಪತ್ರ ಬಿಡುಗಡೆ ಮಾಡಿದ್ದಾರೆ ಅಂತ ಮಾಧ್ಯಮದಲ್ಲಿ ನೋಡಿದ್ದೇನೆ. ಆದರೆ ಅದು ಸುಳ್ಳೋ, ಸತ್ಯವೋ ನನಗೆ ಗೊತ್ತಿಲ್ಲ. ಆರೋಪ ಸುಳ್ಳು ಅಂತ ವಿಜಯೇಂದ್ರ ಹೇಳಿದ್ದಾರೆ ಹೊರತು ಸಹಿ ಹಾಕಿರುವ ಪತ್ರ ಸುಳ್ಳು ಅಂತ ಹೇಳಿಲ್ಲ ಎಂದಿದ್ದಾರೆ.