ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 (PMUY 2.0)
ಭಾರತದ ಪ್ರತಿ ಮನೆಗೆ ಗ್ಯಾಸ್ ಸಿಲಿಂಡರ್ ಸಂಪರ್ಕ ಕಲ್ಪಿಸುವ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ನೀಡುತ್ತಿದೆ. ಬಡವರಿಗೆ ಸಹಾಯವಾಗುವಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿರುವ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ನೀಡುತ್ತಿದೆ.
ಉಚಿತ ಗ್ಯಾಸ್ ಯೋಜನೆ: ಅರ್ಜಿ ಸಲ್ಲಿಸುವ ಹಂತಗಳು ನಿಮಗಾಗಿ
ಅರ್ಹತೆ:
ಅರ್ಜಿದಾರರು ಕನಿಷ್ಠ 18 ವರ್ಷ ವಯಸ್ಸಿನ ಮಹಿಳೆಯರಾಗಿರಬೇಕು.
ಮನೆಯಲ್ಲಿ ಇತರ ಯಾವುದೇ ಎಲ್‌ಪಿಜಿ ಸಂಪರ್ಕವಿಲ್ಲದಿರಬೇಕು.
ಎಸ್‌ಸಿ, ಎಸ್‌ಟಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ), ಅತ್ಯಂತ ಹಿಂದುಳಿದ ವರ್ಗಗಳು ಮತ್ತು ಇತರೆ ಬಡ ಕುಟುಂಬಗಳು
ಅವಶ್ಯಕ ದಾಖಲೆಗಳು:
Know Your Customer (KYC)
ಆಧಾರ್ ಕಾರ್ಡ್ (ಅರ್ಜಿದಾರರ ಗುರುತಿನ ಮತ್ತು ವಿಳಾಸದ ಪುರಾವೆ)
ರೇಷನ್ ಕಾರ್ಡ್ ಅಥವಾ ರಾಜ್ಯ ಸರ್ಕಾರದ ಇತರ ದಾಖಲೆಗಳು
ಬ್ಯಾಂಕ್ ಖಾತೆ ಸಂಖ್ಯೆ ಮತ್ತು IFSC
ಅರ್ಜಿಯ ಪ್ರಕ್ರಿಯೆ:
ಮೊದಲಿಗೆ, ಅರ್ಹ ಫಲಾನುಭವಿಯು ಉಜ್ವಲ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ. ಅರ್ಜಿಯ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅರ್ಜಿ ಡೌನ್‌ಲೋಡ್ ಆದ ನಂತರ ಫಾರ್ಮ್ ನಲ್ಲಿರುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಬೇಕು. ಅರ್ಜಿದಾರನ ಹೆಸರು, ದಿನಾಂಕ, ಸ್ಥಳ, ಮೊದಲಾದ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ನಿಮ್ಮ ಸ್ಥಳೀಯ ಎಲ್‌ಪಿಜಿ ಏಜೆನ್ಸಿಗೆ ಸಲ್ಲಿಸಬೇಕು. ದಾಖಲೆ ಪರಿಶೀಲನೆ ನಂತರ ನಿಮಗೆ ಎಲ್ ಪಿಜಿ ಗ್ಯಾಸ್ ಸಂಪರ್ಕ ಸಿಗಲಿದೆ.
Website :https://pmuy.gov.in/