ಚೀನಾಗೆ ಸೂಕ್ತ ಉತ್ತರ ನೀಡಲು ಸಿ -17 ಗ್ಲೋಬ್‌ಮಾಸ್ಟರ್ ಮತ್ತು ಚಿನೂಕ್ ಜೊತೆ ಸನ್ನದ್ಧವಾಗಿದೆ ಭಾರತೀಯ ಪಡೆ
India prepared lac
ಲಡಾಖ್, ಅಕ್ಟೋಬರ್11: ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ಮುಂದುವರೆದಿದೆ. ಚೀನಾ ವಿವಾದಗಳನ್ನು ಬಗೆಹರಿಸುವ ಬಗ್ಗೆ ಮಾತುಕತೆಗೆ ಉತ್ಸಾಹ ತೋರಿಸುತ್ತಿದ್ದರೂ ಅದರ ಕಾರ್ಯಗಳು ಬೇರೆಯೇ ಆಗಿದೆ.
India prepared lac
ಅಮೆರಿಕದಲ್ಲಿ ಜನವರಿ 2021 ರಿಂದ ಲಸಿಕೆ ವಿತರಣೆ
ಚೀನಾದ ನರಿಬುದ್ದಿಯ ಬಗ್ಗೆ ಚೆನ್ನಾಗಿ ತಿಳಿದಿರುವ ಭಾರತೀಯ ಸೇನೆ ಪ್ರತಿಯೊಂದು ವಿಚಾರದಲ್ಲೂ ತನ್ನ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಭಾರತಕ್ಕೆ ಚೀನಾ ನಡವಳಿಕೆ ಬಗ್ಗೆ ಅರಿವಿರುವ ಕಾರಣ ಸರ್ವ ಸನ್ನದ್ಧ ರೀತಿಯಲ್ಲಿ ಭಾರತೀಯ ಪಡೆ ಸನ್ನದ್ಧವಾಗಿದೆ.

ಭಾರತೀಯ ಸೈನಿಕರು ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಜಾಗರೂಕರಾಗಿದ್ದಾರೆ. ಭಾರತೀಯ ವಾಯುಪಡೆಯ ಬೋಯಿಂಗ್ ಸಿ -17 ಗ್ಲೋಬ್‌ಮಾಸ್ಟರ್ ಕೂಡ ಲಡಾಖ್‌ನಲ್ಲಿದೆ.
ಗ್ಲೋಬ್‌ಮಾಸ್ಟರ್ ಅನ್ನು ಶನಿವಾರ ಲೇಹ್ ಏರ್‌ಬೇಸ್‌ನಲ್ಲಿ ಇಳಿಸಲಾಗಿದೆ.
ಬೋಯಿಂಗ್ ಸಿ -17 ಗ್ಲೋಬ್‌ಮಾಸ್ಟರ್ ಯಾವುದೇ ಕಷ್ಟದ ಸ್ಥಳದಲ್ಲಿ ಬಹಳ ಸುಲಭವಾಗಿ ಇಳಿಯಬಹುದು. ಕಾರ್ಗಿಲ್, ಲಡಾಖ್ ಮತ್ತು ಇತರ ಈಶಾನ್ಯ ಗಡಿಗಳಲ್ಲಿ ಸಹ ವಿಮಾನವು ಬಹಳ ಸುಲಭವಾಗಿ ಇಳಿಯಬಹುದು.
ದೀಪಾವಳಿ ಕೊಡುಗೆ – ಇಪಿಎಫ್‌ಒ ಸದಸ್ಯರಿಗೆ ಹಬ್ಬದಂದು ಮೊದಲ ಕಂತಿನ ಬಡ್ಡಿ ಜಮಾ ಸಾಧ್ಯತೆ
ಚೀನಾದೊಂದಿಗೆ ಯುದ್ಧದ ಸಂದರ್ಭ ಎದುರಾದರೆ ಬೋಯಿಂಗ್-ಸಿ 17 ಬಹಳ ಸಹಾಯಕವಾಗುತ್ತದೆ ಎಂದು ಹೇಳಲಾಗಿದೆ. ಈ ವಿಮಾನಕ್ಕೆ ಇಳಿಯುವಾಗ ಸಮಸ್ಯೆ ಎದುರಾದರೆ ರಿವರ್ಸ್ ಗೇರ್ ಸಹ ನೀಡಲಾಗುತ್ತದೆ. ಅಷ್ಟೇ ಅಲ್ಲ ಎಲ್‌ಎಸಿ ಸಮೀಪದಲ್ಲಿ ಹೆಲಿಕಾಪ್ಟರ್ ಚಿನೂಕ್ ಅನ್ನು ಸಹ ಸಿದ್ಧಪಡಿಸಲಾಗಿದೆ
#WATCH Indian Air Force's Chinook helicopter carries out sortie from its Leh airbase in Ladakh. pic.twitter.com/QO6zLqeNyI
— ANI (@ANI) October 10, 2020
ಹೆಲಿಕಾಪ್ಟರ್ ಚಿನೂಕ್ ಸೇನಾ ಕ್ಯಾಂಪ್ ಗಳಿಗೆ ಸೈನಿಕರ ರವಾನೆ, ಫಿರಂಗಿಗಳ ರವಾನೆ, ಇತರೆ ಶಸ್ತ್ರಾಸ್ತ್ರಗಳ ಪೂರೈಕೆ, ಇಂಧನವನ್ನು ಸಾಗಿಸಬಲ್ಲದು. ಇದು ಒಟ್ಟು 9.6 ಟನ್ ತೂಕದ ವಸ್ತುಗಳನ್ನು ಎತ್ತಿಕೊಂಡು ಹೋಗುವ ಸಾಮಥ್ಯವನ್ನು ಹೊಂದಿದೆ.

ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಪಡೆ ಸಮರ್ಪಕವಾಗಿ ಸಿದ್ಧವಾಗಿದ್ದು, ಯಾವುದೇ ಬೆದರಿಕೆಯನ್ನು ನಿಭಾಯಿಸಲು ಸಜ್ಜುಗೊಂಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv








