ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ನಾಯಕ ನಟರಂತೆ ನಯನತಾರಾಗೂ ದೊಡ್ಡ ಅಭಿಮಾನಿ ಬಳಗವೇ ಇದೆ. ಸದ್ಯ ಅವರ ಬಗ್ಗೆ ಚರ್ಚೆಯೊಂದು ನಡೆಯುತ್ತಿದ್ದು, ನೂರು ಕೋಟಿ ರೂ. ಕೊಟ್ಟರೂ ನಿನ್ನೊಂದಿಗೆ ನಟಿಸಲ್ಲ ಎಂದು ನಟನಿಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಜವಾನ್ ಸಿನಿಮಾದ ಗೆಲುವಿನ ನಂತರ ನಯನತಾರಾ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಈ ಮಧ್ಯೆ 2 ವರ್ಷಗಳ ಹಿಂದೆ ‘ದಿ ಲೆಜೆಂಡ್’ ಚಿತ್ರಕ್ಕೆ ಸರವಣನ್, ನಟ ಕಮ್ ನಿರ್ಮಾಪಕರಾಗಿದ್ದರು. ಅವರು ಪ್ರಚಾರಕ್ಕಾಗಿಯೇ ಸಾಕಷ್ಟು ಕೋಟಿ ಖರ್ಚು ಮಾಡಿದ್ದರು. ಆದರೂ ಅದು ಸೋಲು ಕಂಡಿತ್ತು. ಈ ಚಿತ್ರದಲ್ಲಿ ನಟಿಸಲು ನಟಿ ನಯನತಾರಾ ಅವರಿಗೆ ಮನವಿ ಮಾಡಿದ್ದರು ಎನ್ನಲಾಗಿದೆ. ಆಗ ನಯನತಾರಾ ಇದಕ್ಕೆ ಒಪ್ಪಿಲ್ಲ. 100 ಕೋಟಿ ರೂ. ಕೊಟ್ಟರೂ ನಾನು ನಟಿಸಲ್ಲ ಎಂದಿದ್ದರು ಎನ್ನಲಾಗಿದೆ.
ಆನಂತರ ಸರವಣನ್, ಐರಾವತ ಬೆಡಗಿ ಊರ್ವಶಿಗೆ 20 ಕೋಟಿ ರೂ. ಸಂಭಾವನೆ ನೀಡಿ, ನಟಿಸುವಂತೆ ಮಾಡಿದ್ದರು. ಆದರೆ, ಈ ಚಿತ್ರ ನಟಿಗೆ ಕೊಟ್ಟಷ್ಟು ಲಾಭ ತಂದು ಕೊಡಲಿಲ್ಲ. ಹೀಗಾಗಿ ನಯನತಾರಾ ಚಿತ್ರ ನೋಡಿಯೇ ಒಪ್ಪಿಕೊಳ್ಳುತ್ತಾರೆ. ದುಡ್ಡು ನೋಡಲ್ಲ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.