ಇಂದು ಸ್ಯಾಂಡಲ್ ವುಡ್ ನ ಅಭಿನಯ ಚತುರ ನಟ ಸತೀಶ್ ನೀನಾಸಂಗೆ ಹುಟ್ಟುಹಬ್ಬದ ಸಂಭ್ರಮ. ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಕುಟುಂಬದ ಸದಸ್ಯರ ಜೊತೆ ಸರಳವಾಗಿ ಸತೀಶ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇನ್ನು ಸತೀಶ್ ಅವರಿಗೆ ಚಿತ್ರರಂಗದ ಗಣ್ಯರು ಬರ್ತ್ ಡೇ ಶುಭಕೋರಿದ್ದಾರೆ.
ಇನ್ನು ಜನ್ಮದಿನದ ಖುಷಿಯ ನಡುವೆ ಇಂದು ಸತೀಶ್ ಅವರ ಮೂರು ಹೊಸ ಸಿನಿಮಾಗಳು ಅನೌನ್ಸ್ ಆಗಿವೆ. ನಟಿ ಶರ್ಮಿಳಾ ನಿರ್ಮಾಣದಲ್ಲಿ, ಸತೀಶ್ ನಟನೆಯ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಇಂದು ರಿವೀಲ್ ಆಗಿದೆ. ದಸರಾ ಅನ್ನೋ ಟೈಟಲ್ ಇಟ್ಟು ಸತೀಶ್ ಬರ್ತಡೇ ದಿನವೇ ಶರ್ಮಿಳಾ ಮಾಂಡ್ರೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ.
ಶ್ರೀ ಸಾಯಿ ಪ್ರೊಡಕ್ಷನ್ಸ್ ನಿಂದ ನಿರ್ಮಾಪಕ ಸ್ವಾಮಿ ಗೌಡರಿಂದಲೂ ಸತೀಶ್ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ. ಸತೀಶ್ ಅವರ ಮತ್ತೊಂದು ಸಿನಿಮಾ, ನಿರ್ಮಾಪಕಿ ವಿನುತಾ ಮಂಜುನಾಥ್ ನಿರ್ಮಾಣದಲ್ಲಿ ಬರ್ತಿದೆ. ಈ ಸಿನಿಮಾಗಳಿಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ.
ಇದಲ್ಲದೆ ಸತೀಶ್ ನೀನಾಸಂ ನಟನೆಯ ಗೋದ್ರಾ ಚಿತ್ರತಂಡ ಹೊಸ ಪೋಸ್ಟರ್ ಜೊತೆಗೆ ಸ್ಪೆಷಲ್ ಟೀಸರ್ ಅನ್ನೂ ರಿಲೀಸ್ ಮಾಡಿದೆ.