ಚಂದನವನದ ಬ್ಯೂಟಿ ನಟಿ ಎಂದೇ ಖ್ಯಾತಿಯಾಗಿರುವ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.
ಹೀಗಾಗಿ ಇಂದು ಅವರು ತಮ್ಮ ಹುಟ್ಟು ಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ, ಇಂದು ಅವರ ನಟನೆಯ ಭೈರಾದೇವಿ ಮತ್ತು ಅಜಾಗ್ರತ ಚಿತ್ರಗಳ ಪೋಸ್ಟರ್ ರಿಲೀಸ್ ಆಗುತ್ತಿವೆ.
ಕೆಲವು ವರ್ಷಗಳಿಂದ ಹುಟ್ಟು ಹಬ್ಬದ ಸಂಭ್ರಮದಿಂದ ದೂರವಿದ್ದ ಚೆಲುವೆ, ಈ ಬಾರಿ ಫ್ಯಾನ್ಸ್ಗೆ ಭೇಟಿಯಾಗಲು ಸಮಯ ಮೀಸಲಿಟ್ಟಿದ್ದಾರೆ. ಅಭಿಮಾನಿಗಳ ಜೊತೆಯೇ ತಮ್ಮ ಹುಟ್ಟುಹಬ್ಬ (Birthday) ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದ ಮೂಲಕ ರಾಧಿಕಾ, ತಮ್ಮ ಫ್ಯಾನ್ಸ್ ಗೆ ಆಹ್ವಾನ ನೀಡಿ, ಅಡ್ರೆಸ್ ಕೊಟ್ಟಿದ್ದರು. 10/11 ಎರಡನೇ ಮುಖ್ಯ ರಸ್ತೆ, ಎರಡನೇ ಕ್ರಾಸ್ ಆರ್ಎಂವಿ ಎರಡನೇ ಸ್ಟೇಜ್, ಮೂರನೇ ಬ್ಲಾಕ್ ನ್ಯೂ ಬೆಲ್ ರೋಡ್, ಡಾಲರ್ಸ್ ಕಾಲೋನಿ ಬೆಂಗಳೂರು ಇದು ನನ್ನ ಮನೆಯ ವಿಳಾಸ. ದಯವಿಟ್ಟು ಬನ್ನಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದರು.