ರಾಮಾಂಜನೇಯ ದೇವಸ್ಥಾನಗಳ್ಳಿ ಕಳೆಕಟ್ಟಿದ ಹಬ್ಬದ ವಾತಾವರಣ
ಬೆಂಗಳೂರು: ಇಂದು ಮರ್ಯಾದಾ ಪುರಷೋತ್ತಮ ಶ್ರೀರಾಮನ ಜನ್ಮದಿನ. ಭರತಖಂಡದ ಆರಾಧ್ಯ ದೈವ. ದೇಶ, ವಿದೇಶದಲ್ಲೂ ರಾಮನವಮಿ ಆಚರಿಸುತ್ತಾರೆ. ಹಾಗೇ ನಾಡಿನಾದ್ಯಂತ ರಾಮನವಮಿ ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ.
ಉದ್ಯಾನವನ ನಗರಿ ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಿಗ್ಗೆಯಿಂದ ರಾಮನ ದೇವಸ್ಥಾನದಲ್ಲಿ ಮತ್ತು ಆಂಜನೇಯನ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿವೆ. ನಗರದ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹಬ್ಬದ ವಾತಾವರಣ ಕಳೆಕಟ್ಟಿದ್ದು, ಬೆಳ್ಳಿಗೆ 6 ಗಂಡೆಯಿಂದ ಅಂಜನಿಪುತ್ರನಿಗೆ ವಿಶೇಷ ಪೂಜೆ ನಡೆಯುತ್ತಿದೆ.
ರಾಮಾಂಜನೇಯರ ದರ್ಶನ ಪಡೆದುಕೊಳ್ಳಲು ಅಪಾರ ಪ್ರಮಾಣದ ಭಕ್ತರು ಆಗಮಿಸುತ್ತಿದ್ದಾರೆ. ಇನ್ನೂ 9 ಗಂಟೆಯ ನಂತರ ಆಂಜನೇಯನಿಗೆ ವಿಶೇಷ ಅಭಿಷೇಕ ನಡೆಯುತ್ತದೆ. ಬರುವಂತಹ ಭಕ್ತರಿಗೆ ಪಾನಕ, ಮಜ್ಜಿಗೆ ಹಾಗೂ ಪ್ರಸಾಧ ವಿತರಣೆ ಮಾಡಲಾಗುತ್ತದೆ. ಹಾಗೇ 2 ಗಂಟೆಯ ನಂತರ ರಥೋತ್ಸವ ನಡೆಯುತ್ತದೆ.
ಇನ್ನೂ ರಾಜಾಜಿನಗರದ ರಾಮ ಮಂದಿರ ಮಂದೆ ರಾಮ, ಆಂಜನೇಯ, ಸೀತೆ ಮೂರ್ತಿಗೆ ವಿಶೇಷ ಪೂಜೆ ಮಾಡಿದ್ದಾರೆ. ಈಗಾಗಲೇ ದೇವಸ್ಥಾನದಲ್ಲಿ ಪೂಜೆ ಕಾರ್ಯ ನೆರವೇರಿದ್ದು, ಹೂಗಳಿಂದ ರಾಮಮಂದಿರ ಅಲಂಕೃತಗೊಂಡಿದೆ. ಮುಂಜಾನೆ 4:30 ರಿಂದಲೇ ಪೂಜಾ ಕೈಕರ್ಯ ಆರಂಭವಾಗಿತ್ತು.








