ರಾಜ್ಯದಲ್ಲಿ ಇಂದು ಕೊರೊನಾ ಸ್ಫೋಟ ಸಂಭವಿಸಿದ್ದು, ಇಂದು ಒಂದೇ ದಿನ 84 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಟ್ಟು 1231 ಕ್ಕೆ ಏರಿಕೆಯಾಗಿದೆ. ಇಷ್ಟುದಿನ ಹಸಿರು ವಲಯದಲ್ಲಿದ್ದ ಕೊಪ್ಪಳ ಹಾಗೂ ರಾಯಚೂರಿಗೂ ಈಗ ಮಾರಣಾಂತಿಕ ಕೊರೊನಾ ವಕ್ಕರಿಸಿಕೊಂಡಿದೆ. ಕೊಪ್ಪಳದಲ್ಲಿ 3, ರಾಯಚೂರಿನಲ್ಲಿ 6 ಕೊರೊನಾ ಪ್ರಕರಣಗಳು ದೃಢಪಟ್ಟಿವೆ.
ಇನ್ನು ಉಳಿದಂತೆ ಇಂದು ಬೆಂಗಳೂರು – 18, ಹಾಸನ – 4, ಗದಗ – 5, ಬಳ್ಳಾರಿ – 1, ದಾವಣಗೆರೆ – 1, ಮಂಡ್ಯ – 17, ಮೈಸೂರು – 1, ವಿಜಯಪುರ – 5, ಕೊಡಗು – 1, ಬೆಳಗಾವಿ – 2, ಯಾದಗಿರಿ – 5, ಉತ್ತರ ಕನ್ನಡ – 8 ಪ್ರಕರಣಗಳು ಪತ್ತೆಯಾಗಿದೆ.
ಇನ್ನು ರಾಜ್ಯದಲ್ಲಿ ಇಲ್ಲಿ ತನಕ 37 ಜನರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಇಂದು 12 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 521ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.








